ಅತಿ ಹೆಚ್ಚು ಐಸಿಸಿ ಫೈನಲ್‌ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿ ಇಲ್ಲಿದೆ.

18 November 2023

ಭಾರತದ ಯುವರಾಜ್ ಸಿಂಗ್ ಗರಿಷ್ಠ ಸಂಖ್ಯೆಯ ಐಸಿಸಿ ಫೈನಲ್‌ಗಳನ್ನು ಆಡಿದ್ದು, ಅವರು ಏಳು ಬಾರಿ ಫೈನಲ್ ಪಂದ್ಯಗಳನ್ನು ಆಡಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ವೃತ್ತಿಜೀವನದಲ್ಲಿ ಆರು ಬಾರಿ ಐಸಿಸಿ ಫೈನಲ್‌ಗಳನ್ನು ಆಡಿದ್ದಾರೆ.

ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರು ತಮ್ಮ ವೃತ್ತಿಜೀವನದಲ್ಲಿ 6 ಬಾರಿ ಐಸಿಸಿ ಫೈನಲ್‌ಗಳನ್ನು ಆಡಿದ್ದಾರೆ.

ಶ್ರೀಲಂಕಾದ ಮಹೇಲಾ ಜಯವರ್ಧನೆ 6 ಬಾರಿ ಐಸಿಸಿ ಫೈನಲ್‌ನಲ್ಲಿ ಆಡಿದ್ದಾರೆ.

ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಕೂಡ ಆರು ಬಾರಿ ಐಸಿಸಿ ಫೈನಲ್‌ನಲ್ಲಿ ಆಡಿದ್ದಾರೆ.

ಟೀಂ ಇಂಡಿಯಾದ ನಾಯಕ ಎಂಎಸ್ ಧೋನಿ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಟ್ಟು 5 ಐಸಿಸಿ ಫೈನಲ್ ಪಂದ್ಯಗಳನ್ನು ಆಡಿದ್ದಾರೆ.

ರವೀಂದ್ರ ಜಡೇಜಾ ಕೂಡ ಇದುವರೆಗೆ 5 ಐಸಿಸಿ ಫೈನಲ್‌ ಪಂದ್ಯಗಳನ್ನು ಆಡಿದ್ದಾರೆ.

ಸಚಿನ್ ತೆಂಡೂಲ್ಕರ್ ಕೂಡ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕು ಐಸಿಸಿ ಫೈನಲ್‌ಗಳನ್ನು ಆಡಿದ್ದಾರೆ.

ರೋಹಿತ್ ಶರ್ಮಾ ಇದುವರೆಗೆ ಆರು ಐಸಿಸಿ ಫೈನಲ್‌ಗಳನ್ನು ಆಡಿದ್ದು, ನವೆಂಬರ್ 19 ರಂದು ಏಳನೇ ಫೈನಲ್ ಆಡಲು ಸಜ್ಜಾಗಿದ್ದಾರೆ.

ವಿರಾಟ್ ಕೊಹ್ಲಿ ಕೂಡ ಇದುವರೆಗೆ ಆರು ಬಾರಿ ಐಸಿಸಿ ಫೈನಲ್‌ನಲ್ಲಿ ಆಡಿದ್ದಾರೆ. ಇದು ಅವರ ಏಳನೇ ಐಸಿಸಿ ಫೈನಲ್ ಆಗಲಿದೆ.

NEXT: ಒಂದೇ ಒಂದು ಪಂದ್ಯವನ್ನು ಸೋಲದೆ ವಿಶ್ವಕಪ್ ಫೈನಲ್ ತಲುಪಿದ ತಂಡಗಳಿವು