04-02-2024

ಕಡಿಮೆ ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ 30 ಶತಕ ಪೂರೈಸಿದ ಬ್ಯಾಟರ್ ಯಾರು ಗೊತ್ತಾ?

Author: ಪೃಥ್ವಿ ಶಂಕರ

ಕಡಿಮೆ ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ 30 ಶತಕ ಪೂರೈಸಿದ ಬ್ಯಾಟರ್​ಗಳ ಪೈಕಿ ಮೊದಲ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಕೇವಲ 159 ಇನ್ನಿಂಗ್ಸ್‌ಗಳಲ್ಲಿ 30 ಟೆಸ್ಟ್ ಶತಕ ಪೂರೈಸಿದ್ದರು.

ಎರಡನೇ ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್ 30 ಟೆಸ್ಟ್ ಶತಕಗಳನ್ನು ಪೂರೈಸಲು 162 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 167 ಇನ್ನಿಂಗ್ಸ್‌ಗಳಲ್ಲಿ 30 ಟೆಸ್ಟ್ ಶತಕಗಳನ್ನು ಪೂರೈಸಿದ್ದರು.

ಇದೀಗ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕೇನ್ ವಿಲಿಯಮ್ಸನ್ 169 ಇನ್ನಿಂಗ್ಸ್‌ಗಳಲ್ಲಿ 30 ಟೆಸ್ಟ್ ಶತಕಗಳನ್ನು ಸಿಡಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 170 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರು.

ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರು 174 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 30 ಶತಕಗಳನ್ನು ಗಳಿಸಿದ್ದರು.