17-02-2024

ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ಸ್ ಕಿತ್ತಿರುವ ಬೌಲರ್‌ಗಳ ಪಟ್ಟಿ

Author: Vinay Bhat

ಮುತ್ತಯ್ಯ ಮುರಳೀಧರನ್

ಶ್ರೀಲಂಕಾದ ಲೆಜೆಂಡ್ ಬೌಲರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 800 ವಿಕೆಟ್‌ ಪಡೆಯುವ ಮೂಲಕ ಅಗ್ರ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಶೇನ್ ವಾರ್ನ್

ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 708 ವಿಕೆಟ್'ಗಳನ್ನು ಪಡೆದಿದ್ದಾರೆ.

ಜೇಮ್ಸ್ ಆಂಡರ್ಸನ್

ಇಂಗ್ಲೆಂಡ್ ಪರ ಟೆಸ್ಟ್ ಆಡುತ್ತಿರುವ ಜೇಮ್ಸ್ ಆಂಡರ್ಸನ್ 696 ವಿಕೆಟ್‌ಗಳೊಂದಿಗೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್ ಆಗಿದ್ದಾರೆ.

ಅನಿಲ್ ಕುಂಬ್ಳೆ

ಕರ್ನಾಟಕದ ಅನಿಲ್ ಕುಂಬ್ಳೆ ಅವರು 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಸ್ವರೂಪದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಸ್ಟುವರ್ಟ್ ಬ್ರಾಡ್

ಸ್ಟುವರ್ಟ್ ಬ್ರಾಡ್ 604 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್‌ನ ಎರಡನೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಗ್ಲೆನ್ ಮೆಕ್‌ಗ್ರಾತ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಜೆಂಡರಿ ಗ್ಲೆನ್ ಮೆಕ್‌ಗ್ರಾತ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 563 ವಿಕೆಟ್‌ಗಳನ್ನು ಪಡೆದಿದ್ದಾರೆ.

ಕರ್ಟ್ನಿ ವಾಲ್ಷ್

ವೆಸ್ಟ್ ಇಂಡೀಸ್‌ಗಾಗಿ 132 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಟಾರ್ ಕರ್ಟ್ನಿ ವಾಲ್ಷ್ 519 ಬ್ಯಾಟರ್‌ಗಳನ್ನು ಔಟ್ ಮಾಡಿದ್ದರು.

ನಾಥನ್ ಲಿಯಾನ್

ಪ್ರಸ್ತುತ ಟೆಸ್ಟ್ ಕ್ರಿಕೆಟ್​ನ ಶ್ರೇಷ್ಠ ಸ್ಪಿನ್ನರ್​ಗಳನ್ನು ಒಬ್ಬರಾಗಿರುವ ನಾಥನ್ ಲಿಯಾನ್ ಆಸ್ಟ್ರೇಲಿಯಾ ಪರ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 517 ವಿಕೆಟ್ ಪಡೆದಿದ್ದಾರೆ.

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದರು.