13-12-2023

ಪಂದ್ಯ ಮುಗಿದ ಬಳಿಕ ಕ್ಷಮೆ ಕೇಳಿದ ರಿಂಕು ಸಿಂಗ್: ಯಾಕೆ ಗೊತ್ತೇ?

Author: Vinay Bhat

ರಿಂಕು ಸಿಂಗ್

ಈ ವರ್ಷ ಅಂತರರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ರಿಂಕು ಸಿಂಗ್ ಆಡಿದ ಕೆಲವೇ ಪಂದ್ಯಗಳಲ್ಲಿ ಭರವಸೆ ಮೂಡಿಸಿ ಭವಿಷ್ಯದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ರಿಂಕುವಿನ ಅಬ್ಬರ

ರಿಂಕು ಸಿಂಗ್ ಅಬ್ಬರ ದಕ್ಷಿಣ ಆಫ್ರಿಕಾ ನೆಲದಲ್ಲೂ ಮುಂದುವರೆದಿದ್ದು, ಅಜೇಯ 68 ರನ್ ಸಿಡಿಸಿ ಸ್ಫೋಟಕ ಅರ್ಧಶತಕ ಗಳಿಸಿದರು.

ಬಿರುಸಿನ ಇನ್ನಿಂಗ್ಸ್

ರಿಂಕು ಸಿಂಗ್ ಅವರ ಬಿರುಸಿನ ಇನ್ನಿಂಗ್ಸ್‌ನಲ್ಲಿ 9 ಫೋರ್ ಮತ್ತು 2 ಸಿಕ್ಸರ್ ಒಳಗೊಂಡು ಒಟ್ಟು 11 ಬೌಂಡರಿಗಳನ್ನು ಬಾರಿಸಿದರು.

ಕ್ಷಮೆ ಯಾಚನೆ

ಆದಾಗ್ಯೂ, ರಿಂಕು ಬಿರುಗಾಳಿಯ ಇನ್ನಿಂಗ್ಸ್ ನಂತರ, ಕ್ಷಮೆ ಕೇಳಬೇಕಾಯಿತು. ಇದಕ್ಕೆ ಕಾರಣ ಅವರಿ ಸಿಡಿಸಿದ ಆ ಒಂದು ಸಿಕ್ಸರ್.

ಗಾಜು ಪುಡಿಪುಡಿ

ರಿಂಕು ಸಿಂಗ್ ಅವರು ಏಡೆನ್ ಮಾರ್ಕ್ರಾಮ್ ಬೌಲಿಂಗ್'ನಲ್ಲಿ ಸಿಕ್ಸರ್ ಹೊಡೆದಿದ್ದರು. ಈ ಚೆಂಡು ಮೀಡಿಯಾ ಬಾಕ್ಸ್‌ನ ಗ್ಲಾಸ್‌ಗೆ ಬಡಿಯಿತು. ಇದರಿಂದಾಗಿ ಗ್ಲಾಸ್ ಪುಡಿಯಾಗಿತ್ತು. ಇದಕ್ಕಾಗಿ ಅವರು ಕ್ಷಮೆ ಕೇಳಿದರು.

ವೃತ್ತಿಜೀವನ

ರಿಂಕು ಸಿಂಗ್ ಇಲ್ಲಿಯವರೆಗೆ 11 ಟಿ 20 ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು ತಮ್ಮ ಬ್ಯಾಟ್‌ನಿಂದ 248 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 82 ಕ್ಕಿಂತ ಹೆಚ್ಚು.

ಭಾರತಕ್ಕೆ ಸೋಲು

ರಿಂಕು ಸಿಂಗ್ ಅವರ ಅಮೋಘ ಇನ್ನಿಂಗ್ಸ್ ಹೊರತಾಗಿಯೂ ಎರಡನೇ ಟಿ20ಯಲ್ಲಿ ಭಾರತ ಸೋಲು ಕಂಡಿತು. ಈ ಪಂದ್ಯವನ್ನು ಆಫ್ರಿಕಾ 5 ವಿಕೆಟ್‌ಗಳಿಂದ ಗೆದ್ದುಕೊಂಡಿತು.