03-06-2024

T20 World Cup 2024: ಪಂತ್ ಅಥವಾ ಸ್ಯಾಮ್ಸನ್; ಗವಾಸ್ಕರ್ ಪ್ರಕಾರ ಯಾರಿಗೆ ತಂಡದಲ್ಲಿ ಸ್ಥಾನ?

Author: ಪೃಥ್ವಿ ಶಂಕರ

9ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತ ತಂಡ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಶನಿವಾರ ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆರಂಭಿಸಿದರು.

ಆದಾಗ್ಯೂ, ಆರಂಭಿಕರಾಗಿ ಪರಿಣಾಮ ಬೀರದ ಸಂಜು ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಪ್ರಮುಖ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ನೀಡುವುದನ್ನು ಮುಂದುವರೆಸಿದರು.

ಆದರೆ ಇದಕ್ಕೆ ತದ್ವೀರುದ್ಧವಾಗಿ ತಂಡದಲ್ಲಿ ಸ್ಥಾನ ಪಡೆದಿದ್ದ ಮತ್ತೊಬ್ಬ ವಿಕೆಟ್‌ಕೀಪರ್ ರಿಷಬ್ ಪಂತ್, 53 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಸ್ಯಾಮ್ಸನ್ ನೀಡಿದ ಈ ಕಳಪೆ ಪ್ರದರ್ಶನದಿಂದಾಗಿ, ಅವರು ತಂಡದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ, ಟೀಮ್ ಇಂಡಿಯಾದ ಪ್ಲೇಯಿಂಗ್ 11 ರಲ್ಲಿ ಪಂತ್ ಮತ್ತು ಸ್ಯಾಮ್ಸನ್‌ನಲ್ಲಿ ಯಾವ ಆಟಗಾರನನ್ನು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಸೇರಿಸಬೇಕು ಎಂದು ಮಾಜಿ ಆರಂಭಿಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸ್ಯಾಮ್ಸನ್‌ಗಿಂತ ಪಂತ್ ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ರಾಜಸ್ಥಾನದ ನಾಯಕ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ, ಆದರೆ ಪಂತ್ ಕಳೆದ ಕೆಲವು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಕೂಡ ಮಾಡಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಈ ಮೂಲಕ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್‌ಗಿಂತ ರಿಷಬ್ ಪಂತ್​ಗೆ ಅವಕಾಶ ನೀಡಬೇಕು ಎಂಬುದು ಗವಾಸ್ಕರ್ ಅವರ ಅಭಿಪ್ರಾಯವಾಗಿದೆ.