ನಿವೃತ್ತಿಯ ನಂತರ ರೋಹಿತ್-ವಿರಾಟ್​ಗೆ ಸಿಗುವ ಪಿಂಚಣಿ ಎಷ್ಟು ಗೊತ್ತಾ?

30  June 2024

Pic credit - BCCI

Author : ಪೃಥ್ವಿಶಂಕರ

Pic credit - BCCI

2024 ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿದೆ.

ಭಾರತ ಚಾಂಪಿಯನ್

Pic credit - BCCI

ಇತಿಹಾಸ ನಿರ್ಮಿಸಿದ ಬಳಿಕ ಇಡೀ ಭಾರತವೇ ಸಂತಸದಲ್ಲಿ ತೇಲುತ್ತಿದ್ದರೆ, ಇತ್ತ ತಂಡದ ಇಬ್ಬರು ದಿಗ್ಗಜ ಬ್ಯಾಟರ್ ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ರೋಹಿತ್- ಕೊಹ್ಲಿ

Pic credit - BCCI

ದಶಕಗಳ ಟಿ20 ಕ್ರಿಕೆಟ್ ಅನ್ನು ಅಕ್ಷರಶಃ ಆಳಿದ ಈ ಇಬ್ಬರು ದಿಗ್ಗಜರು ಇನ್ನು ಮುಂದೆ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ನೋವು ಎಲ್ಲರ ಮನದಲ್ಲೂ ಮೂಡಿದೆ.

ಟಿ20ಗೆ ನಿವೃತ್ತಿ

Pic credit - BCCI

ಈ ನಡುವೆ ಟಿ20 ಮಾದರಿಗೆ ನಿವೃತ್ತಿ ಘೋಷಿಸಿರುವ ಈ ಇಬ್ಬರು ಆಟಗಾರರಿಗೆ ಇತರ ನೌಕರರಂತೆ ಪಿಂಚಣೆ ಸಿಗುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಪಿಂಚಣಿ

Pic credit - BCCI

ವಾಸ್ತವವಾಗಿ ಬಿಸಿಸಿಐ ಭಾರತೀಯ ಕ್ರಿಕೆಟಿಗರಿಗೆ ಅವರ ನಿವೃತ್ತಿಯ ನಂತರ ಪಿಂಚಣಿ ನೀಡುತ್ತದೆ. ಇದಕ್ಕಾಗಿ ಬಿಸಿಸಿಐ ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಹೆರಿದೆ.

ನಿಯಮ

Pic credit - BCCI

ಈ ನಿಯಮಗಳನುಸಾರ ನಿವೃತ್ತ ಆಟಗಾರರಿಗೆ ಪಿಂಚಣಿ ನೀಡಲಾಗುತ್ತದೆ. ಬಿಸಿಸಿಐನ ಪಿಂಚಣಿ ಸ್ಲ್ಯಾಬ್ ಅನ್ನು ಪ್ರಥಮ ದರ್ಜೆ ಪಂದ್ಯಗಳು ಮತ್ತು ಟೆಸ್ಟ್ ಕ್ರಿಕೆಟ್ ಪಂದ್ಯಗಳ ಆಧಾರದ ಮೇಲೆ ಮಾಡಲಾಗಿದೆ.

25 ಟೆಸ್ಟ್

Pic credit - BCCI

ಅದರಂತೆ ಭಾರತದ ಪರ 25ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಆಟಗಾರನಿಗೆ ತಿಂಗಳಿಗೆ 70,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ.

70000 ಪಿಂಚಣಿ

Pic credit - BCCI

ಆದರೆ 25ಕ್ಕಿಂತ ಕಡಿಮೆ ಟೆಸ್ಟ್ ಪಂದ್ಯಗಳನ್ನು ಆಡಿದ ಕ್ರಿಕೆಟಿಗರಿಗೆ ತಿಂಗಳಿಗೆ 60,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ.

60000 ಪಿಂಚಣಿ

Pic credit - BCCI

ಇದರರ್ಥ ಭಾರತದ ಪರ 25ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರಿಗೂ ಪಿಂಚಣಿ ಸಿಗಲಿದೆ.

ಪಿಂಚಣಿಗೆ ಅರ್ಹರು