IND vs AFG T20I ಯಲ್ಲಿ ರೋಹಿತ್ ಪುಡಿಗಟ್ಟಲಿರುವ ದಾಖಲೆಗಳು

11-January-2024

Author: Vinay Bhat

ಜನವರಿ 11, 2024 ರಂದು ಪ್ರಾರಂಭವಾಗುವ ಮೂರು ಪಂದ್ಯಗಳ ಟಿ20I ಸರಣಿಯಲ್ಲಿ ಭಾರತ ತಂಡವು ಅಫ್ಘಾನಿಸ್ತಾನವನ್ನು ಎದುರಿಸಲಿದೆ.

3 T20I ಪಂದ್ಯ

ರೋಹಿತ್ ಶರ್ಮಾ 14 ತಿಂಗಳ ಅಂತರದ ನಂತರ ಭಾರತದ T20I ತಂಡಕ್ಕೆ ಮರಳಿದ್ದಾರೆ ಮತ್ತು ಅಫ್ಘಾನಿಸ್ತಾನ ವಿರುದ್ಧ ತಂಡವನ್ನು ಮುನ್ನಡೆಸಲಿದ್ದಾರೆ.

ರೋಹಿತ್ ನಾಯಕ

ಅಫ್ಘಾನಿಸ್ತಾನ ವಿರುದ್ಧ ಮುಂಬರುವ ಮೂರು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಮುರಿಯಬಹುದು. ಅವುಗಳೆಲ್ಲದರ ಒಂದು ನೋಟ ಇಲ್ಲಿದೆ.

ರೋಹಿತ್ ದಾಖಲೆ

ರೋಹಿತ್ ಶರ್ಮಾ ಪುರುಷರ ಕ್ರಿಕೆಟಿನಲ್ಲಿ ಅತಿ ಹೆಚ್ಚು ಟಿ20ಐ ಪಂದ್ಯವಾಡಿದ ಆಟಗಾರರಾಗಿದ್ದಾರೆ. ಇದೀಗ ಎರಡು ಪಂದ್ಯಗಳನ್ನು ಆಡಿದರೆ 150 ಟಿ20 ಆಡಿದ ಮೊದಲ ಪುರುಷ ಕ್ರಿಕೆಟಿಗ ಆಗಲಿದ್ದಾರೆ.

150 T20I ಪಂದ್ಯ

T20I ಇತಿಹಾಸದಲ್ಲಿ 4000 ರನ್ ಗಳಿಸಿದ ಎರಡನೇ ಬ್ಯಾಟರ್ ಆಗಲು ರೋಹಿತ್ ಶರ್ಮಾ ಮೂರು ಪಂದ್ಯಗಳಲ್ಲಿ 147 ರನ್ ಅಗತ್ಯವಿದೆ.

4000 ರನ್

ಭಾರತವು ಅಫ್ಘಾನಿಸ್ತಾನವನ್ನು ವೈಟ್‌ವಾಶ್ ಮಾಡಿದರೆ, ರೋಹಿತ್ ಭಾರತದ ನಾಯಕನಾಗಿ 41 ಟಿ20ಐಗಳನ್ನು ಗೆದ್ದ ಧೋನಿ ಸಾರ್ವಕಾಲಿಕ ದಾಖಲೆ ಮುರಿಯಲಿದ್ದಾರೆ.

ಹೆಚ್ಚಿನ ಗೆಲುವುಗಳು

ಇದುವರೆಗೆ 148 ಟಿ20 ಪಂದ್ಯಗಳಲ್ಲಿ ರೋಹಿತ್ 182 ಸಿಕ್ಸರ್ ಸಿಡಿಸಿದ್ದಾರೆ. 18 ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರೆ, 200 ಸಿಕ್ಸರ್‌ ಸಿಡಿಸಿದ ಮೊದಲ ಬ್ಯಾಟರ್ ಆಗಲಿದ್ದಾರೆ.

200 ಸಿಕ್ಸರ್‌ಗಳು

ರೋಹಿತ್ ಇದುವರೆಗೆ 148 ಟಿ20 ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಇನ್ನೊಂದು ಶತಕ ಗಳಿಸಿದರೆ, ಸೂರ್ಯ ಮತ್ತು ಮ್ಯಾಕ್ಸ್‌ವೆಲ್‌ರನ್ನು ಹಿಂದಿಕ್ಕುತ್ತಾರೆ.

T20I ಗಳಲ್ಲಿ ಹೆಚ್ಚಿನ 100

NEXT: ಕೊಹ್ಲಿ ಮೊದಲ ಟಿ20 ಆಡದಿರಲು ಕಾರಣ ಬಹಿರಂಗ

NEXT: ಕೊಹ್ಲಿ ಮೊದಲ ಟಿ20 ಆಡದಿರಲು ಕಾರಣ ಬಹಿರಂಗ