01-02-2024

ಮೂರನೇ ಮದುವೆ ಬೆನ್ನಲ್ಲೇ ಗುಡ್ ನ್ಯೂಸ್ ನೀಡಿದ ಶೋಯೆಬ್ ಮಲಿಕ್

Author: Vinay Bhat

ಮಲಿಕ್ ಶುಭ ಸುದ್ದಿ

ಶೋಯೆಬ್ ಮಲಿಕ್ ಮೂರನೇ ಮದುವೆಯ ನಂತರ ಸದಾ ಸುದ್ದಿಯಲ್ಲಿದ್ದಾರೆ. ಇದೀಗ ಪಾಕ್ ಮಾಜಿ ಕ್ರಿಕೆಟಿಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಹೊಸ ಕಾರ್ಯಕ್ರಮ

ಶೋಯೆಬ್ ಮಲಿಕ್ ಈಗ ಹೊಸ ಚಾಟ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ನೀಡಿದ್ದಾರೆ.

ಸಂವಾದ

ಶೋಯೆಬ್ ಮಲಿಕ್ ಹೊಸ ಟಾಕ್ ಶೋ ಅನ್ನು ಹೋಸ್ಟ್ ಮಾಡಲಿದ್ದಾರೆ. ಇದರಲ್ಲಿ ಅವರು ಪಾಕಿಸ್ತಾನಿ ಕ್ರಿಕೆಟಿಗರೊಂದಿಗೆ ಸಂವಹನ ನಡೆಸಲಿದ್ದಾರೆ.

ಬಿಪಿಎಲ್

ಮಲಿಕ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಅನ್ನು ದಿಢೀರ್ ಆಗಿ ಮಧ್ಯದಲ್ಲಿ ಬಿಟ್ಟು ಈ ಟಾಕ್ ಶೋ ಚಿತ್ರೀಕರಣಕ್ಕಾಗಿ ದುಬೈಗೆ ಹೋಗಿದ್ದಾರೆ.

ಕಮ್'ಬ್ಯಾಕ್

ವರದಿಗಳ ಪ್ರಕಾರ, ಮಲಿಕ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಪುನರಾಗಮನ ಮಾಡಲಿದ್ದಾರೆ. ಅವರು ಫೆಬ್ರವರಿ 3 ರಂದು ಆಡಲಿದ್ದಾರೆ.

ಸುಳ್ಳು ಸುದ್ದಿ

ಶೋಯೆಬ್ ಇದ್ದಕ್ಕಿದ್ದಂತೆ ಬಾಂಗ್ಲಾದೇಶವನ್ನು ತೊರೆದು ದುಬೈಗೆ ಹೋದಾಗ, ಫಿಕ್ಸಿಂಗ್ ಆರೋಪವಿದೆ ಎಂದು ವದಂತಿ ಹರಡಿತು. ಬಳಿಕ ಇದು ಸುಳ್ಳು ಸುದ್ದಿ ಎಂದರು.

ಮಲಿಕ್ ಸ್ಪಷ್ಟನೆ

ಈ ವದಂತಿಯ ನಂತರ, ಮಲಿಕ್ ಫಿಕ್ಸಿಂಗ್ ಆರೋಪಗಳನ್ನು ಸುಳ್ಳು ಎಂದು ಹೇಳಿದ್ದಾರೆ. ಬಿಪಿಎಲ್ ತಂಡ ಕೂಡ ಮಲಿಕ್ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು.

ಏನು ಹೇಳಿಕೆ?

ದುಬೈನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದ ಕಾರಣ ನಾನು ಬಾಂಗ್ಲಾದೇಶದಿಂದ ಹಿಂತಿರುಗಬೇಕಾಯಿತು. ಅಗತ್ಯವಿದ್ದರೆ, ತಂಡಕ್ಕೆ ಬೆಂಬಲವಾಗಿ ಇರುತ್ತೇನೆ ಎಂದಿದ್ದಾರೆ.