23-10-2023

ವಿಶ್ವದಾಖಲೆ ನಿರ್ಮಿಸಿದ ಗಿಲ್: ಏನಿದು ರೆಕಾರ್ಡ್ ನೋಡಿ

ಭಾರತ-ನ್ಯೂಝಿಲೆಂಡ್

ಭಾನುವಾರ ನ್ಯೂಝಿಲೆಂಡ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ 4 ವಿಕೆಟ್'ಗಳ ಭರ್ಜರಿ ಜಯ ಸಾಧಿಸಿ ಪಾಯಿಂಟ್ ಟೇಬಲ್'ನಲ್ಲಿ ಅಗ್ರಸ್ಥಾನಕ್ಕೇರಿದೆ.

ವಿಶ್ವದಾಖಲೆ

ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಶುಭ್'ಮನ್ ಗಿಲ್ ವಿಶ್ವದಾಖಲೆ ನಿರ್ಮಿದ್ದಾರೆ.

2000 ರನ್

ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಗಿಲ್​ಗೆ ಏಕದಿನ ಕ್ರಿಕೆಟ್​ನಲ್ಲಿ 2000 ರನ್ ಪೂರೈಸಲು 14 ರನ್ ಅಗತ್ಯವಿತ್ತು. ಇದೀಗ ಗಿಲ್ ಈ ಸಾಧನೆ ಮಾಡಿದ್ದಾರೆ.

ವೇಗದ ಬ್ಯಾಟರ್

ಕೇವಲ 38 ಪಂದ್ಯದಲ್ಲಿ ಇದುವರೆಗೆ ಯಾರುಕೂಡ ಈ ಸಾಧನೆ ಮಾಡಲಿಲ್ಲ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 2000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟರ್ ಗಿಲ್ ಆಗಿದ್ದಾರೆ.

ಆಮ್ಲ ದಾಖಲೆ

ಗಿಲ್ 14 ರನ್ ಗಳಿಸುವ ಮೂಲಕ ಏಕದಿನದಲ್ಲಿ ವೇಗವಾಗಿ 2000 ರನ್ ಗಳಿಸಿದ ದಕ್ಷಿಣ ಆಫ್ರಿಕಾದ ದಂತಕಥೆ ಹಾಶೀಮ್ ಆಮ್ಲ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

38ನೇ ಇನ್ನಿಂಗ್ಸ್

ಆಮ್ಲಾ 40 ಏಕದಿನ ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಳಿಸಿದ್ದರು. ಆದರೆ ಗಿಲ್ ಇದೀಗ ತಮ್ಮ 38 ನೇ ಇನ್ನಿಂಗ್ಸ್'ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

3000 ರನ್

95 ರನ್ ಸಿಡಿಸುವ ಮೂಲಕ ಕೊಹ್ಲಿ ಎಲ್ಲಾ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ 3,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

4ನೇ ಆಟಗಾರ

ಕೊಹ್ಲಿ ಅವರು ಲೆಜೆಂಡ್ ಸನತ್ ಜಯಸೂರ್ಯ (13,430 ರನ್ ಗಳಿಸಿ) ಸಾಧನೆ ಹಿಂದಿಕ್ಕಿ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಆಟಗಾರ ಎನಿಸಿಕೊಂಡಿದ್ದಾರೆ.

IND vs NZ: ಕಿಂಗ್ ಕೊಹ್ಲಿ ಸೃಷ್ಟಿಸಿದ ದಾಖಲೆಗಳು ನೋಡಿ