10-12-2023

ಭಾರತ-ಆಫ್ರಿಕಾ 1st ಟಿ20ಗೆ ವರುಣನ ಕಾಟ: ಎಷ್ಟು ಗಂಟೆಗೆ ಮಳೆ ಬರಲಿದೆ?

Author: Vinay Bhat

ಭಾರತ-ಆಫ್ರಿಕಾ

ಇಂದು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ.

ಮಳೆ ಅಡ್ಡಿ

ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ. ಅಕ್ಯುವೆದರ್ ಪ್ರಕಾರ, ಡರ್ಬನ್‌ನಲ್ಲಿ ಪಂದ್ಯದ ಸಮಯ ಗುಡುಗು ಸಹಿತ ಮಳೆಯಾಗಲಿದೆ.

ಶೇ. 75 ರಷ್ಟು ಮಳೆ

ಮೊದಲ ಟಿ20 ಪಂದ್ಯದ ಸಮಯ ಶೇಕಡಾ 75 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ತಾಪಮಾನವು ಸುಮಾರು 20 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು 100% ಮೋಡ ಕವಿದಿರುತ್ತದೆ.

ಎಷ್ಟು ಗಂಟೆಗೆ

ಸ್ಥಳೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ (2:30 PM IST) ಮತ್ತು ರಾತ್ರಿ 8 ರಿಂದ 10 ಗಂಟೆ ವರೆಗೆ (11:30 PM ನಿಂದ 1:30 AM ವರೆಗೆ) ಗುಡುಗು ಸಹಿತ ಮಳೆಯಾಗಲಿದೆ.

ಟೀಮ್ ಇಂಡಿಯಾ

ಟೀಮ್ ಇಂಡಿಯಾ ಡರ್ಬನ್ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. ಇದುವರೆಗೆ ಆಡಿದ 5 T20I ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ.

ದಕ್ಷಿಣ ಆಫ್ರಿಕಾ

ಆತಿಥೇಯ ದಕ್ಷಿಣ ಆಫ್ರಿಕಾ 11 ಪಂದ್ಯಗಳಲ್ಲಿ 5 ಗೆಲುವುಗಳನ್ನು ಹೊಂದಿದೆ. ಇಲ್ಲಿನ ಪಿಚ್ ಬೌನ್ಸ್ ಮತ್ತು ಸ್ವಿಂಗ್'ನಿಂದ ಕೂಡಿದ್ದು, ಬ್ಯಾಟರ್'ಗಳಿಗೆ ಸಹಕಾರಿ ಆಗಲಿದೆ.

ಹಲವರ ಆಗಮನ

ಗಿಲ್, ರವೀಂದ್ರ ಜಡೇಜಾ, ಸಿರಾಜ್ ಸೇರಿದಂತೆ ಕೆಲ ಆಟಗಾರರು ವಿಶ್ವಕಪ್ ಬಳಿಕ ತಂಡಕ್ಕೆ ಮರಳಿದ ಕಾರಣ, ಮೆನ್ ಇನ್ ಬ್ಲೂ ಸಾಕಷ್ಟು ಬಲಿಷ್ಠವಾಗಿದೆ.