25-05-2024

IPL 2024: ಟ್ರೋಫಿಯೊಂದಿಗೆ ಬೀಚ್‌ನಲ್ಲಿ ಕಮ್ಮಿನ್ಸ್ ಮತ್ತು ಶ್ರೇಯಸ್ ಫೋಟೋಶೂಟ್

Author: ಪೃಥ್ವಿ ಶಂಕರ

17ನೇ ಆವೃತ್ತಿಯ ಫೈನಲ್ ಪಂದ್ಯ ನಾಳೆ ಚೆನ್ನೈ ಚೆಪಾಕ್ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ.

ಎರಡೂ ತಂಡಗಳು ಎಲ್ಲಾ ವಿಭಾಗದಲ್ಲಿ ಸಾಕಷ್ಟು ಬಲಿಷ್ಠವಾಗಿರುವ ಕಾರಣ ಫೈನಲ್ ಪಂದ್ಯ ಸಾಕಷ್ಟು ರೋಚಕತೆ ಹೆಚ್ಚಿಸಿದೆ.

ಆದರೆ ಈ ಫೈನಲ್ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ನಾಯಕರಾದ ಪ್ಯಾಟ್ ಕಮ್ಮಿನ್ಸ್ ಮತ್ತು ಶ್ರೇಯಸ್ ಅಯ್ಯರ್ ಬೀಚ್‌ನಲ್ಲಿ ಟ್ರೋಫಿಯೊಂದಿಗೆ ಕಾಣಿಸಿಕೊಂಡರು.

ಕ್ವಾಲಿಫೈಯರ್-1ರಲ್ಲಿ ಹೈದರಾಬಾದ್ ತಂಡವನ್ನು ಸೋಲಿಸಿ ಕೋಲ್ಕತ್ತಾ ಫೈನಲ್ ಪ್ರವೇಶಿಸಿದ್ದರೆ, ಹೈದರಾಬಾದ್ ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಪ್ರಶಸ್ತಿ ಪಂದ್ಯಕ್ಕೂ ಮುನ್ನ ಎರಡೂ ತಂಡಗಳ ನಾಯಕರ ಫೋಟೋಶೂಟ್ ಮಾಡಲಾಗಿದ್ದು, ಇದರಲ್ಲಿ ಶ್ರೇಯಸ್ ಅಯ್ಯರ್ ಮತ್ತು ಪ್ಯಾಟ್ ಕಮಿನ್ಸ್ ಟ್ರೋಫಿಯೊಂದಿಗೆ ಚೆನ್ನೈ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದರು.

ಕೆಕೆಆರ್ ನಾಯಕ ಶ್ರೇಯಸ್ ಮತ್ತು ಹೈದರಾಬಾದ್‌ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಅವರ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಎರಡೂ ತಂಡಗಳ ನಾಯಕರು ಆಟೋ ರಿಕ್ಷಾದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವೇಳೆ ಕಡಲತೀರದಲ್ಲಿ ನಿಲ್ಲಿಸಿದ್ದ ಬೋಟ್‌ನಲ್ಲಿ ಕಮ್ಮಿನ್ಸ್ ಮತ್ತು ಶ್ರೇಯಸ್ ಕೂಡ ಟ್ರೋಫಿಯೊಂದಿಗೆ ನಿಂತಿರುವುದು ಕಂಡು ಬಂತು.

ಕೋಲ್ಕತ್ತಾ ಇದುವರೆಗೆ ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದರೆ, ಸನ್ ರೈಸರ್ಸ್ ಹೈದರಾಬಾದ್ 2016ರಲ್ಲಿ ಟ್ರೋಫಿ ಗೆದ್ದಿತ್ತು.

ಹೀಗಾಗಿ ನಾಳಿನ ಪಂದ್ಯವನ್ನು ಗೆಲ್ಲುವ ತಂಡ ತನ್ನ ಟ್ರೋಫಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಲ್ಲದೆ ತನ್ನ ಖಾತೆಗೆ ಭಾರಿ ಮೊತ್ತದ ಬಹುಮಾನವನ್ನು ಹಾಕಿಸಿಕೊಳ್ಳಲಿದೆ.

NEXT: ತಮ್ಮ ನಾಯಕತ್ವದಲ್ಲಿ ತಂಡವನ್ನು ಫೈನಲ್​ಗೆ ಕೊಂಡೊಯ್ದ ಆಸೀಸ್ ಆಟಗಾರರಿವರು