ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಈ ಎಲ್ಲಾ ಪಂದ್ಯಗಳನ್ನು 9 ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಆ 9 ಸ್ಥಳಗಳ ಮಾಹಿತಿ ಇಲ್ಲಿದೆ.
Author: ಪೃಥ್ವಿ ಶಂಕರ
ಕೆನ್ಸಿಂಗ್ಟನ್ ಓವಲ್: ಇದು ವೆಸ್ಟ್ ಇಂಡೀಸ್‌ನ ಅತ್ಯಂತ ಸುಂದರವಾದ ಕ್ರೀಡಾಂಗಣಗಳಲ್ಲಿ ಒಂದಾಗಿದ್ದು, ಈ ಮೈದಾನದಲ್ಲಿ ಅಭಿಮಾನಿಗಳ ಒಟ್ಟು ಸಾಮರ್ಥ್ಯ 25 ಸಾವಿರಕ್ಕೂ ಹೆಚ್ಚು.
ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ: ಈ ಕ್ರೀಡಾಂಗಣವು ತೆರೆದ ಮೇಲ್ಭಾಗವನ್ನು ಹೊಂದಿದೆ. ಈ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಅಭಿಮಾನಿಗಳ ಸಾಮರ್ಥ್ಯ 15000 ಸಾವಿರ.
ಪ್ರಾವಿಡೆನ್ಸ್: ಈ ಮೈದಾನದಲ್ಲಿ ಹಲವು ಸ್ಮರಣೀಯ ಪಂದ್ಯಗಳು ನಡೆದಿವೆ. ಈ ಕ್ರೀಡಾಂಗಣವು ಸರಿಸುಮಾರು 20000 ಸಾವಿರ ಅಭಿಮಾನಿಗಳ ಆಸನ ಸಾಮರ್ಥ್ಯವನ್ನು ಹೊಂದಿದೆ.
ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ: ಈ ಕ್ರೀಡಾಂಗಣ ತುಂಬಾ ಚಿಕ್ಕದಾಗಿದ್ದು,ಈ ಮೈದಾನದ ಆಸನ ಸಾಮರ್ಥ್ಯ ಕೇವಲ 10000 ಸಾವಿರ.
ಹಾನರ್ಸ್ ವೇಲ್ ಸ್ಟೇಡಿಯಂ: ವೆಸ್ಟ್ ಇಂಡೀಸ್‌ನ ಮೂರನೇ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದೆ. ಈ ಮೈದಾನದಲ್ಲಿ ಅಭಿಮಾನಿಗಳ ಸಾಮರ್ಥ್ಯ ಸುಮಾರು 18000.
ಡ್ಯಾರೆನ್ ಸಮ್ಮಿ ಕ್ರಿಕೆಟ್ ಮೈದಾನ: ಈ ಕ್ರೀಡಾಂಗಣದ ಒಟ್ಟು ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಒಟ್ಟು 15000 ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಬಹುದು.
ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: ಈ ಕ್ರೀಡಾಂಗಣದಲ್ಲಿ 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಏಕಕಾಲದಲ್ಲಿ ಪಂದ್ಯವನ್ನು ವೀಕ್ಷಿಸಬಹುದಾದ ಏಕೈಕ ಕ್ರೀಡಾಂಗಣವಾಗಿದೆ. ಈ ಕ್ರೀಡಾಂಗಣದ ಒಟ್ಟು ಸಾಮರ್ಥ್ಯ 34 ಸಾವಿರ.
ಸೆಂಟ್ರಲ್ ಬ್ರೋವರ್ಡ್ ಪಾರ್ಕ್: ಕ್ರೀಡಾಂಗಣವು ಒಟ್ಟು 25000 ಅಭಿಮಾನಿಗಳ ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ಅಮೆರಿಕದ ಎರಡನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ.
ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ: ಈ ಕ್ರೀಡಾಂಗಣ ಚಿಕ್ಕದಾದರೂ ತುಂಬಾ ಸುಂದರವಾಗಿದೆ. ಈ ಕ್ರೀಡಾಂಗಣದಲ್ಲಿ ಏಕಕಾಲಕ್ಕೆ 15000 ಸಾವಿರ ಅಭಿಮಾನಿಗಳು ಕುಳಿತು ಪಂದ್ಯ ವೀಕ್ಷಿಸಬಹುದು.