ತಿರುವನಂತಪುರಂನಲ್ಲಿ ಟೀಂ ಇಂಡಿಯಾ ತಂಗಿರುವ ದಿ ಲೀಲಾ ಕೋವಲಂ ಹೋಟೆಲ್ನ ವಿಶೇಷತೆಗಳೇನು ಗೊತ್ತಾ?
02 October 2023
ಎರಡನೇ ಅಭ್ಯಾಸ ಪಂದ್ಯಕ್ಕಾಗಿ ಟೀಂ ಇಂಡಿಯಾ ಗುವಾಹಟಿಯಿಂದ ಕೇರಳದ ತಿರುವನಂತಪುರಂಗೆ ಬಂದಿಳಿದಿದೆ.
ಇಲ್ಲಿ ರೋಹಿತ್ ಪಡೆ ನೆದರ್ಲೆಂಡ್ಸ್ ವಿರುದ್ಧ ತನ್ನ ಎರಡನೇ ಅಭ್ಯಾಸ ಪಂದ್ಯವನ್ನಾಡಲಿದೆ.
ಇನ್ನು ತಿರುವನಂತಪುರಂನಲ್ಲಿ ಟೀಂ ಇಂಡಿಯಾ ದಿ ಲೀಲಾ ಕೋವಲಂ ಹೋಟೆಲ್ನಲ್ಲಿ ಆಶ್ರಯ ಪಡೆದಿದೆ.
ತಿರುವನಂತಪುರಂನ ಅತ್ಯಂತ ಐಶಾರಾಮಿ ಹೋಟೆಲ್ಗಳಲ್ಲಿ ಒಂದಾದ ಲೀಲಾ ಕೋವಲಂ ಹೋಟೆಲ್ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ..
ಲೀಲಾ ಕೋವಲಂ ಹೋಟೆಲ್ ಅನ್ನು ಖ್ಯಾತ ವಾಸ್ತುಶಿಲ್ಪಿ ಚಾಲ್ರ್ಸ್ ಕೊರಿಯಾ ವಿನ್ಯಾಸಗೊಳಿಸಿದ್ದಾರೆ.
ಸೂರ್ಯಸ್ತಮಾನದ ವಿಹಂಗಮ ನೋಟ ಈ ಹೋಟೆಲ್ನ ಮತ್ತೊಂದು ವಿಶೇಷತೆಯಾಗಿದೆ.
ಈ ಹೋಟೆಲ್ 67 ಎಕರೆಯಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.
ರೂಂ ಬಾಡಿಗೆ ದಿನಕ್ಕೆ 15 ರಿಂದ 16 ಸಾವಿರ ರೂ ಆಗಿದೆ. ಆದರೆ ಅವಶ್ಯಕತೆಗಳಿಗೆ ತಕ್ಕಂತೆ ದರದಲ್ಲಿ ಬದಲಾವಣೆಯಾಗಲಿದೆ.
ಈ ಹೋಟೆಲ್ನ ಒಳಗಿನಿಂದಲೇ ಅರೇಬಿಯನ್ ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಇದನ್ನೂ ಓದಿ