ಯಂಗ್ ಇಂಡಿಯಾ; ಒಂದೇ ದಿನ ಸಿಡಿದ 3 ಶತಕ

02-02-2024

ಯಂಗ್ ಇಂಡಿಯಾ; ಒಂದೇ ದಿನ ಸಿಡಿದ 3 ಶತಕ

Author: ಪೃಥ್ವಿ ಶಂಕರ

TV9 Kannada Logo For Webstory First Slide
ಫೆಬ್ರವರಿ 2 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೂವರು ಭಾರತೀಯ ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿ ಮಿಂಚಿದ್ದಾರೆ.

ಫೆಬ್ರವರಿ 2 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೂವರು ಭಾರತೀಯ ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿ ಮಿಂಚಿದ್ದಾರೆ.

jaiswal (6)

ಒಂದು ಶತಕ ಯಶಸ್ವಿ ಜೈಸ್ವಾಲ್ ಅವರ ಬ್ಯಾಟ್‌ನಿಂದ ಬಂದರೆ, ಉಳಿದೆರಡು ಶತಕಗಳು 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಉದಯ್ ಸಹರಾನ್ ಮತ್ತು ಸಚಿನ್ ದಾಸ್ ಅವರಿಂದ ಸಿಡಿದಿವೆ.

ವಿಶಾಖಪಟ್ಟಣಂ ಟೆಸ್ಟ್‌ನ ಮೊದಲ ದಿನ ಜೈಸ್ವಾಲ್ ಅಜೇಯ 179 ರನ್ ಗಳಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಎರಡನೇ ಶತಕವಾಗಿದೆ.

ವಿಶಾಖಪಟ್ಟಣಂ ಟೆಸ್ಟ್‌ನ ಮೊದಲ ದಿನ ಜೈಸ್ವಾಲ್ ಅಜೇಯ 179 ರನ್ ಗಳಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಎರಡನೇ ಶತಕವಾಗಿದೆ.

ಮತ್ತೊಂದೆಡೆ, ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ನಾಯಕ ಉದಯ್ ಸಹರಾನ್ ನೇಪಾಳ ವಿರುದ್ಧ 100 ರನ್​ಗಳ ಇನ್ನಿಂಗ್ಸ್ ಆಡಿದರು..

ಹಾಗೆಯೇ ಮತ್ತೊಬ್ಬ ಯುವ ಬ್ಯಾಟರ್ ಸಚಿನ್ ದಾಸ್ ಕೂಡ ಅಂಡರ್-19 ವಿಶ್ವಕಪ್‌ನಲ್ಲಿ 101 ಎಸೆತಗಳಲ್ಲಿ 116 ರನ್ ಸಿಡಿಸಿದರು.

ಅಂದಹಾಗೆ ಯಶಸ್ವಿ ಜೈಸ್ವಾಲ್ ಕೂಡ ಅಂಡರ್-19 ವಿಶ್ವಕಪ್ ಆಡಿದ್ದಾರೆ. 2020 ರಲ್ಲಿ, ಈ ಬ್ಯಾಟ್ಸ್‌ಮನ್ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ದೇಶವನ್ನು ಚಾಂಪಿಯನ್ ಮಾಡಿದ್ದರು.

NEXT: ಟೆಸ್ಟ್‌ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಟಾಪ್ 10 ಆಟಗಾರರಿವರು