12-01-2024

ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 10 ಬೌಲರ್‌ಗಳಿವರು

Author: ಪೃಥ್ವಿ ಶಂಕರ

2001ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಮಾಜಿ ವೇಗಿ ಚಮಿಂದಾ ವಾಸ್ 8 ಓವರ್‌ಗಳಲ್ಲಿ 19 ರನ್ ನೀಡಿ 8 ವಿಕೆಟ್ ಕಬಳಿಸಿದ್ದರು.

ಪಾಕ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 9 ಓವರ್ ಬೌಲ್ ಮಾಡಿ 12 ರನ್ ನೀಡಿ 7 ವಿಕೆಟ್ ಕಬಳಿಸಿದ್ದರು.

2003ರಲ್ಲಿ ನಮೀಬಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಗ್ಲೆನ್ ಮೆಕ್‌ಗ್ರಾತ್ 7 ಓವರ್‌ಗಳಲ್ಲಿ 15 ರನ್ ನೀಡಿ 7 ವಿಕೆಟ್ ಕಬಳಿಸಿದ್ದರು.

2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ರಶೀದ್ ಖಾನ್ 8.4 ಓವರ್ ಬೌಲ್ ಮಾಡಿ 18ರನ್​ ನೀಡಿ 7 ವಿಕೆಟ್ ಕಬಳಿಸಿದ್ದರು.

ಇಂದು ನಡೆದ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ವನಿಂದು ಹಸರಂಗ 5.5 ಓವರ್‌ಬೌಲ್ ಮಾಡಿ 19ರನ್​ಗಳಿಗೆ 7 ವಿಕೆಟ್‌ ಉರುಳಿಸಿದ್ದಾರೆ.

ಆಂಡಿ ಬೈಕೆಲ್ 2003ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 10 ಓವರ್​ಗಳಲ್ಲಿ 20ರನ್ ನೀಡಿ 7 ವಿಕೆಟ್ ಕಬಳಿಸಿದ್ದರು.

ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 2000ನೇ ಇಸವಿಯಲ್ಲಿ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿ 30ರನ್​ಗಳಿಗೆ 7 ವಿಕೆಟ್ ಕಬಳಿಸಿದ್ದರು.

2023ರಲ್ಲಿ ಜರ್ಸಿ ವಿರುದ್ಧದ ಏಕದಿನ ಪಂದ್ಯದಲ್ಲಿ ಅಲಿ ಖಾನ್ 9.4 ಓವರ್‌ಗಳಲ್ಲಿ 32ರನ್ ನೀಡಿ 7 ವಿಕೆಟ್ ಕಬಳಿಸಿದ್ದರು.

2015ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟಿಮ್ ಸೌಥಿ 9 ಓವರ್​ಗಳಲ್ಲಿ 33ರನ್ ನೀಡಿ 7 ವಿಕೆಟ್ ಕಬಳಿಸಿದ್ದರು.

ಟ್ರೆಂಟ್ ಬೌಲ್ಟ್ 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ 10 ಓವರ್​ಗಳಲ್ಲಿ 34ರನ್ ನೀಡಿ 7 ವಿಕೆಟ್ ಕಬಳಿಸಿದ್ದರು.