20-01-2024

ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೆಚ್ಚು ವಿಕೆಟ್ ಪಡೆದ ಭಾರತದ ಟಾಪ್-10 ಬೌಲರ್‌ಗಳಿವರು

Author: ಪೃಥ್ವಿ ಶಂಕರ

ಭಾಗವತ್ ಚಂದ್ರಶೇಖರ್ ಇಂಗ್ಲೆಂಡ್ ವಿರುದ್ಧ 23 ಟೆಸ್ಟ್ ಪಂದ್ಯಗಳನ್ನಾಡಿದ್ದು 27.27ರ ಸರಾಸರಿಯಲ್ಲಿ 95 ವಿಕೆಟ್ ಪಡೆದಿದ್ದಾರೆ.

ಅನಿಲ್ ಕುಂಬ್ಳೆ ಇಂಗ್ಲೆಂಡ್ ವಿರುದ್ಧದ 19 ಟೆಸ್ಟ್ ಪಂದ್ಯಗಳಲ್ಲಿ 30.59 ಸರಾಸರಿಯಲ್ಲಿ 92 ವಿಕೆಟ್ ಪಡೆದಿದ್ದಾರೆ.

ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಆಡಿರುವ 19 ಟೆಸ್ಟ್ ಪಂದ್ಯಗಳಲ್ಲಿ 28.59 ಸರಾಸರಿಯಲ್ಲಿ 88 ವಿಕೆಟ್ ಪಡೆದಿದ್ದಾರೆ.

ಬಿಶನ್ ಸಿಂಗ್ ಬೇಡಿ ಇಂಗ್ಲೆಂಡ್ ವಿರುದ್ಧದ 22 ಟೆಸ್ಟ್ ಪಂದ್ಯಗಳಲ್ಲಿ 85 ವಿಕೆಟ್ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 27  ಟೆಸ್ಟ್‌ ಪಂದ್ಯಗಳಲ್ಲಿ ಕಪಿಲ್ ದೇವ್ 37.34 ಸರಾಸರಿಯಲ್ಲಿ 85 ವಿಕೆಟ್ ಪಡೆದಿದ್ದಾರೆ.

ಇಶಾಂತ್ ಶರ್ಮಾ 23 ಟೆಸ್ಟ್ ಪಂದ್ಯಗಳಲ್ಲಿ 32.40 ಸರಾಸರಿಯಲ್ಲಿ 67 ವಿಕೆಟ್ ಪಡೆದಿದ್ದಾರೆ.

ವಿನೂ ಮಂಕಡ್ ಇಂಗ್ಲೆಂಡ್ ವಿರುದ್ಧದ 11 ಟೆಸ್ಟ್‌ ಪಂದ್ಯಗಳಲ್ಲಿ 23.12 ಸರಾಸರಿಯಲ್ಲಿ 54 ವಿಕೆಟ್ ಪಡೆದಿದ್ದಾರೆ.

ರವೀಂದ್ರ ಜಡೇಜಾ 16 ಟೆಸ್ಟ್ ಪಂದ್ಯಗಳಲ್ಲಿ 35.37ರ ಸರಾಸರಿಯಲ್ಲಿ 51 ವಿಕೆಟ್ ಪಡೆದಿದ್ದಾರೆ.

ಹರ್ಭಜನ್ ಸಿಂಗ್ ಇಂಗ್ಲೆಂಡ್ ವಿರುದ್ಧದ 14 ಟೆಸ್ಟ್ ಪಂದ್ಯಗಳಲ್ಲಿ 39.20 ಸರಾಸರಿಯಲ್ಲಿ 45 ವಿಕೆಟ್ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ 15 ಪಂದ್ಯಗಳಲ್ಲಿ ಮೊಹಮ್ಮದ್ ಶಮಿ 38.29 ಸರಾಸರಿಯಲ್ಲಿ 44 ವಿಕೆಟ್ ಪಡೆದಿದ್ದಾರೆ.

NEXT: ಅಂಡರ್ 19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ನಾಯಕರಿವರು