ಐಪಿಎಲ್ನಲ್ಲಿ ಈವರೆಗೆ ಒಂದೇ ತಂಡಕ್ಕಾಗಿ ಆಡಿದ ಆಟಗಾರರು ಯಾರೆಲ್ಲ ಗೊತ್ತೇ?
21-March-2024
Author: Vinay Bhat
ವಿರಾಟ್ ಕೊಹ್ಲಿ 2008 ರಲ್ಲಿ RCB ಸೇರಿಕೊಂಡರು. ಅಂದಿನಿಂದ ಬೆಂಗಳೂರು ಮೂಲದ ಫ್ರಾಂಚೈಸಿಗಾಗಿ ಕಿಂಗ್ ಕೊಹ್ಲಿ ಆಡುತ್ತಿದ್ದಾರೆ.
ವಿರಾಟ್ ಕೊಹ್ಲಿ
ಜಸ್ಪ್ರೀತ್ ಬುಮ್ರಾ 2013 ರಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಬುಮ್ರಾ ತಂಡದಲ್ಲಿರುವಾಗ ಮುಂಬೈ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ.
ಜಸ್ಪ್ರೀತ್ ಬುಮ್ರಾ
ಸುನಿಲ್ ನರೈನ್ 2012 ರಲ್ಲಿ KKR ಗೆ ಸೇರಿಕೊಂಡು ಇಂದಿನ ವರೆಗೆ ಆಡುತ್ತಿದ್ದಾರೆ. ಸಾರ್ವಕಾಲಿಕ ಪ್ರಮುಖ ವಿಕೆಟ್-ಟೇಕರ್ ಆಗಿ ಗುರುತಿಸಿಕೊಂಡಿದ್ದಾರೆ.
ಸುನಿಲ್ ನರೈನ್
ಶ್ರೀಲಂಕಾದ ದಿಗ್ಗಜ ಲಸಿತ್ ಮಾಲಿಂಗ ಕೂಡ ಮುಂಬೈ ಇಂಡಿಯನ್ಸ್ ಪರ ಒಟ್ಟು 122 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ. 170 ವಿಕೆಟ್‌ಗಳನ್ನು ಪಡೆದ್ದಾರೆ.
ಲಸಿತ್ ಮಾಲಿಂಗ
ಐಪಿಎಲ್ 2010 ಹರಾಜಿನಲ್ಲಿ ಕೀರಾನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಸೇರಿಕೊಂಡರು. MI ಗಾಗಿ 13 ಋತುಗಳಲ್ಲಿ ಒಟ್ಟು 189 ಪಂದ್ಯಗಳಲ್ಲಿ ಆಡಿದ್ದಾರೆ.
ಕೀರಾನ್ ಪೊಲಾರ್ಡ್
ರಿಷಬ್ ಪಂತ್ 2016 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ ನಂತರ 98 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದು, ಈ ಬಾರಿ ಕೂಡ ಡೆಲ್ಲಿ ಪರ ಕಾಣಿಸಿಕೊಳ್ಳಲಿದ್ದಾರೆ.
ರಿಷಬ್ ಪಂತ್
ಲೆಜೆಂಡರಿ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಪರ ಆರು ಸೀಸನ್‌ಗಳಲ್ಲಿ ಒಟ್ಟು 78 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ.
ಸಚಿನ್ ತೆಂಡೂಲ್ಕರ್
ಶೇನ್ ವಾರ್ನ್ ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 55 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ರಾಯಲ್ಸ್ ತಂಡವನ್ನು 2008 ರಲ್ಲಿ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದರು.
ಶೇನ್ ವಾರ್ನ್