ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿಗೆ ಹೊಸ ಹೆಸರು: ಏನದು?

06-November-2023

ಭಾನುವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ದ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 243ರನ್'ಗಳ ಭರ್ಜರಿ ಜಯ ಸಾಧಿಸಿತು.

ಭಾರತ-ಆಫ್ರಿಕಾ

ಕಠಿಣ ಪಿಚ್​ನಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದ ವಿರಾಟ್ 121 ಎಸೆತಗಳಲ್ಲಿ 10 ಫೋರ್​ನೊಂದಿಗೆ ಅಜೇಯ 101 ರನ್ ಗಳಿಸಿದರು.

ಕೊಹ್ಲಿ ಶತಕ

ಸಚಿನ್ ತೆಂಡೂಲ್ಕರ್ ಅವರ 49ನೇ ಶತಕದ ದಾಖಲೆಯನ್ನು ಸರಿಗಟ್ಟಿದ ನಂತರ ಪಾಕಿಸ್ತಾನದಲ್ಲಿ ಕೊಹ್ಲಿಗೆ ಹೊಸ ಹೆಸರು ಇಡಲಾಗಿದೆ.

ಕೊಹ್ಲಿಗೆ ಹೊಸ ಹೆಸರು

ಕೊಹ್ಲಿಗೆ ಈಗಾಗಲೇ ಕಿಂಗ್ ಕೊಹ್ಲಿ, ಚೇಸ್ ಮಾಸ್ಟರ್, ಚೀಕು ಹೀಗೆ ಕೆಲವು ಹೆಸರುಗಳಿಗೆ. ಆದರೆ, ಕೊಹ್ಲಿಗೆ ಇಟ್ಟಿರುವ ಹೆಸರು ಇದು ಯಾವುದೂ ಅಲ್ಲ.

ಈ ಹೆಸರಲ್ಲ

ಕಿಂಗ್ ಕೊಹ್ಲಿ’ ಎನ್ನುವುದಕ್ಕಿಂತ ‘ದಿ ಎಂಪರರ್’ ಎಂಬ ಹೆಸರೇ ವಿರಾಟ್​ಗೆ ಹೆಚ್ಚು ಸೂಕ್ತ ಎಂದು ಪಾಕಿಸ್ತಾನದ ಕ್ರೀಡಾ ಕಾರ್ಯಕ್ರಮ ‘ದಿ ಪೆವಿಲಿಯನ್’ನಲ್ಲಿ ಹೇಳಲಾಗಿದೆ.

'ಚಕ್ರವರ್ತಿ'

ಈ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗರಾದ ವಾಸಿಂ ಅಕ್ರಮ್, ಶೋಯೆಬ್ ಮಲಿಕ್, ಮಿಸ್ಬಾ ಉಲ್ ಹಕ್ ಉಪಸ್ಥಿತರಿದ್ದರು. ಇದರಲ್ಲಿ ಕೊಹ್ಲಿಗೆ ಹೊಸ ಹೆಸರು ಇಡಲಾಗಿದೆ.

ಪಾಕ್ ದಿಗ್ಗಜರು

ಈ ಕಾರ್ಯಕ್ರಮದಲ್ಲಿ ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ. ಜೊತೆಗೆ ಭಾರತವನ್ನು ಸೋಲಿಸಲು ಏನು ಮಾಡಬೇಕು ಎಂದು ಮಲಿಕ್ ಬಳಿ ಕೇಳಿದಾಗ ಅವರು ''ನಾವು ಟಿವಿ ಆಫ್ ಮಾಡಬೇಕಷ್ಟೆ'' ಎಂದು ಹೇಳಿದರು.

ಟಿವಿ ಆಫ್ ಮಾಡಿ

ಭಾರತ ತಂಡ ಸೆಮಿ ಫೈನಲ್​ಗು ಮುನ್ನ ತನ್ನ ಕೊನೆಯ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ನ. 12 ರಂದು ಬೆಂಗಳೂರಿನಲ್ಲಿ ಆಡಲಿದೆ.

ಮುಂದಿನ ಪಂದ್ಯ

ಮೊದಲ ಸ್ಥಾನದಲ್ಲಿ ಭಾರತ ಭದ್ರ: ವಿಶ್ವಕಪ್ ಪಾಯಿಂಟ್ಸ್ ಟೇಬಲ್ ಇಲ್ಲಿದೆ