ಸಚಿನ್ ಊರಲ್ಲೇ ಬರುತ್ತಾ ಕೊಹ್ಲಿ 49ನೇ ಶತಕ?

02 November 2023

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿ ಆಗಲಿದೆ.

ಭಾರತ-ಶ್ರೀಲಂಕಾ

ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಯಾಕೆಂದರೆ ಕೊಹ್ಲಿ ವಿಶೇಷ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಕೊಹ್ಲಿ ಕಣ್ಣು

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ಅವರ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಸರಿಗಟ್ಟಲು ಕೊಹ್ಲಿ ಹತ್ತಿರವಾಗಿದ್ದಾರೆ. ಇದು ಸಚಿನ್ ಊರಲ್ಲೇ ನಡೆಯುತ್ತಾ ನೋಡಬೇಕು.

ಸಚಿನ್ ಊರಲ್ಲಿ ಸಾಧನೆ?

ವಿರಾಟ್ ಕೊಹ್ಲಿ ಇಲ್ಲಿಯವರೆಗೆ 48 ಶತಕಗಳನ್ನು ಹೊಂದಿದ್ದು, ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಲು ಕೇವಲ 1 ಶತಕ ಬೇಕಾಗಿದೆ.

1 ಶತಕ

ವಾಂಖೆಡೆ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಆಡಿರುವ 6 ಪಂದ್ಯಗಳಲ್ಲಿ 1 ಶತಕ ಸೇರಿದಂತೆ 269 ರನ್ ಗಳಿಸಿದ್ದಾರೆ.

ವಾಂಖೆಡೆಯಲ್ಲಿ ದಾಖಲೆ

ಕೊಹ್ಲಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 12 50+ ಸ್ಕೋರ್‌ ಗಳಿಸಿ ರೋಹಿತ್ ಜೊತೆ ಸಮಬಲದಲ್ಲಿದ್ದಾರೆ. ಕೊಹ್ಲಿಯಿಂದ ಇನ್ನೊಂದು ಅರ್ಧಶತಕ ಬಂದರೆ ಸಾಧನೆ ಆಗಲಿದೆ.

12+ ಫಿಫ್ಟಿ

ಕೊಹ್ಲಿ ಏಕದಿನದಲ್ಲಿ ಶ್ರೀಲಂಕಾ ವಿರುದ್ಧ 11 ಅರ್ಧಶತಕ ಸಿಡಿಸಿ ದ್ರಾವಿಡ್ ಜೊತೆ ಜಂಟಿಸ್ಥಾನ ಹಂಚಿಕೊಂಡಿದ್ದಾರೆ. ಇಂದು ಅರ್ಧಶತಕ ಬಂದರೆ ರಾಹುಲ್ ದಾಖಲೆ ಮುರಿಯಲಿದ್ದಾರೆ.

11 ಅರ್ಧಶತಕ

ಭಾರತ ಹಾಗೂ ಶ್ರೀಲಂಕಾ ನಡುವಣ ವಿಶ್ವಕಪ್ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಪಂದ್ಯ ಎಷ್ಟು ಗಂಟೆಗೆ?

ಪಾಯಿಂಟ್ಸ್ ಟೇಬಲ್'ನಲ್ಲಿ ಕುಸಿದ ಭಾರತ: ಅಗ್ರಸ್ಥಾನ ಯಾರಿಗೆ?