ಗೆದ್ದ ಬಳಿಕ ಕೊಹ್ಲಿ ಬಳಿ ಬಂದ ರೈನಾ ಏನು ಮಾಡಿದ್ರು ನೋಡಿ

30 October 2023

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಭಾನುವಾರ ಲಕ್ನೋದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 100 ರನ್'ಗಳ ಭರ್ಜರಿ ಜಯ ಸಾಧಿಸಿತು.

ಭಾರತಕ್ಕೆ ಜಯ

ತಮ್ಮ ತವರು ರಾಜ್ಯದಲ್ಲಿ ಪಂದ್ಯ ನಡೆಯುತ್ತಿದ್ದ ಕಾರಣ ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಮೈದಾನದಲ್ಲಿ ಹಾಜರಿದ್ದರು.

ಸುರೇಶ್ ರೈನಾ

ಭಾರತ ಗೆದ್ದ ಬಳಿಕ ವಿರಾಟ್ ಕೊಹ್ಲಿ ಬಳಿ ಬಂದ ಸುರೇಶ್ ರೈನಾ ಪ್ರೀತಿಯ ಅಪ್ಪುಗೆ ನೀಡಿದ್ದಾರೆ. ಇದರ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಕೊಹ್ಲಿ-ರೈನಾ

ಪಂದ್ಯ ಆರಂಭಕ್ಕೂ ಮುನ್ನ ಏಕಾನ ಸ್ಟೇಡಿಯಂನಲ್ಲಿ ರೈನಾ ಹಾಗೂ ಮೊಹಮ್ಮದ್ ಕೈಫ್ ಐಸಿಸಿ ವಿಶ್ವಕಪ್ ಟ್ರೋಫಿ ಜೊತೆ ಫೋಟೋಕ್ಕೆ ಪೋಸ್ ನೀಡಿದ್ದರು.

ಕೈಫ್-ರೈನಾ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ರೋಹಿತ್ 87 ರನ್ ಸಿಡಿಸಿದರು.

ಭಾರತ 229-9

ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 129 ರನ್​ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತು ಮಿಂಚಿದರು.

ಇಂಗ್ಲೆಂಡ್ 129 ಆಲೌಟ್

ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಬಹುತೇಕ ಸೆಮಿ ಫೈನಲ್​ಗೆ ಪ್ರವೇಶಿಸಿದೆ. ಇನ್ನೊಂದು ಪಂದ್ಯ ಗೆದ್ದರೆ ಇದು ಖಚಿತವಾಗಲಿದೆ.

ಸೆಮಿ ಫೈನಲ್

ವಿಶ್ವಕಪ್​ನಲ್ಲಿ ಭಾರತ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ನವೆಂಬರ್ 2 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ.

ಮುಂದಿನ ಪಂದ್ಯ

ಪಾಯಿಂಟ್ಸ್ ಟೇಬಲ್ ನಲ್ಲಿ ಮೇಲೇರಿದ ನೆದರ್ಲೆಂಡ್ಸ್