25-04-2024

ಐಪಿಎಲ್‌ನಲ್ಲಿ ಕೊಹ್ಲಿ ಎಷ್ಟು ಪಂದ್ಯಗಳಿಗೆ ಗೈರಾಗಿದ್ದಾರೆ ಗೊತ್ತಾ?

Author: ಪೃಥ್ವಿ ಶಂಕರ

ಐಪಿಎಲ್‌ನಲ್ಲಿ ಇಂದು ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಪಂದ್ಯವನ್ನಾಡುತ್ತಿರುವ ಆರ್‌ಸಿಬಿಗೆ ಇಂದಿನ ಪಂದ್ಯ ಐತಿಹಾಸಿಕ ಪಂದ್ಯವಾಗಿದೆ.

ಐಪಿಎಲ್ ಮೊದಲ ಸೀಸನ್​ನಿಂದಲೂ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡುತ್ತಿರುವ ಆರ್​ಸಿಬಿಗೆ ಇಂದಿನ ಪಂದ್ಯ 250ನೇ ಪಂದ್ಯವಾಗಿದೆ.

ಮುಂಬೈ ಇಂಡಿಯನ್ಸ್ ನಂತರ ಈ ಸಾಧನೆ ಮಾಡಿದ ಎರಡನೇ ತಂಡ ಎಂಬ ದಾಖಲೆಯನ್ನು ಆರ್​ಸಿಬಿ ನಿರ್ಮಿಸಿದೆ.

ಇಂದಿನ ಪಂದ್ಯವನ್ನು ಹೊರತುಪಡಿಸಿ 249 ಪಂದ್ಯಗಳನ್ನಾಡಿರುವ ಆರ್​ಸಿಬಿ, ಇದರಲ್ಲಿ 115 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 127ರಲ್ಲಿ ಸೋಲು ಕಂಡಿದೆ.

ಆರಂಭದಿಂದಲೂ ಆರ್​ಸಿಬಿ ಪರ ಆಡುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಫ್ರಾಂಚೈಸಿ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದು, ಕೊಹ್ಲಿ ಇದುವರೆಗೆ 7642 ರನ್ ಬಾರಿಸಿದ್ದಾರೆ.

ವಿಕೆಟ್​ಗಳ ವಿಚಾರದಲ್ಲಿ ಮಾಜಿ ಆರ್​ಸಿಬಿ ಆಟಗಾರ ಯುಜುವೇಂದ್ರ ಚಹಾಲ್ ಫ್ರಾಂಚೈಸಿ ಪರ ಅತಿ ಹೆಚ್ಚು 139 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೇಲೆ ಹೇಳಿದಂತೆ ವಿರಾಟ್ ಕೊಹ್ಲಿ ಮೊದಲ ಸೀಸನ್‌ನಿಂದ ಈ ಫ್ರಾಂಚೈಸಿಯ ಭಾಗವಾಗಿದ್ದಾರೆ. ಹೀಗಿರುವಾಗ ಕೊಹ್ಲಿ ಐಪಿಎಲ್‌ಗೆ ಎಷ್ಟು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದಾರೆ ಎಂಬುದು ಪ್ರಶ್ನೆ.

ಇದುವರೆಗೆ ಆರ್‌ಸಿಬಿಯ 249 ಪಂದ್ಯಗಳಲ್ಲಿ ಕೊಹ್ಲಿ 245 ಪಂದ್ಯಗಳನ್ನು ಆಡಿದ್ದಾರೆ. ಅಂದರೆ ಕೊಹ್ಲಿ 17 ಸೀಸನ್‌ಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಮಿಸ್ ಮಾಡಿಕೊಂಡಿದ್ದಾರೆ.

NEXT: ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನದಲ್ಲಿ ಸೂರ್ಯ..!