02-05-2024

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡ ಯಾವುದು ಗೊತ್ತಾ?

Author: ಪೃಥ್ವಿ ಶಂಕರ

9ನೇ ಆವೃತ್ತಿಯ ಟಿ20 ವಿಶ್ವಕಪ್​ಗೆ ಜೂನ್ 1 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯ ವಹಿಸಲಿದೆ.

ಈ ಚುಟುಕು ಸಮರದಲ್ಲಿ ಇದುವರೆಗೆ ಹಲವು ಪಂದ್ಯಗಳು ನಡೆದಿವೆ. ಇದರಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ತಂಡಗಳನ್ನು ನೋಡುವುದಾದರೆ..

ಟಿ20 ವಿಶ್ವಕಪ್‌ನಲ್ಲಿ ಅಧಿಕ ಪಂದ್ಯಗಳನ್ನು ಗೆದ್ದ ದಾಖಲೆ ಶ್ರೀಲಂಕಾದ ಹೆಸರಿನಲ್ಲಿದೆ. ಈ ತಂಡ ಒಟ್ಟು 31 ಪಂದ್ಯಗಳನ್ನು ಗೆದ್ದಿದೆ.

ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನ ಇದುವರೆಗೆ ಒಟ್ಟು 28 ಪಂದ್ಯಗಳನ್ನು ಗೆದ್ದಿದೆ.

ಟಿ20 ವಿಶ್ವಕಪ್‌ನಲ್ಲಿ 27 ಪಂದ್ಯಗಳನ್ನು ಗೆದ್ದಿರುವ ಭಾರತ ಮೂರನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ 25 ಪಂದ್ಯಗಳನ್ನು ಗೆದ್ದು, ನಾಲ್ಕನೇ ಸ್ಥಾನದಲ್ಲಿದೆ.

ಐದನೇ ಸ್ಥಾನದಲ್ಲಿದರುವ ಇಂಗ್ಲೆಂಡ್ 24 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ.

ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ನಲ್ಲಿ ಒಟ್ಟು 24 ಪಂದ್ಯಗಳನ್ನು ಗೆದ್ದಿದೆ.

ನ್ಯೂಜಿಲೆಂಡ್ ತಂಡ ಇದುವರೆಗೆ 23 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ.

ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ 19 ಪಂದ್ಯಗಳನ್ನು ಗೆದ್ದಿದೆ.

ಬಾಂಗ್ಲಾದೇಶ ಒಂಬತ್ತು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

NEXT: T20 World Cup: ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಭಾರತದ ಪ್ರದರ್ಶನ ಹೇಗಿದೆ ಗೊತ್ತಾ?