04-03-2024

ಟೆಸ್ಟ್ ಸರಣಿಯಲ್ಲಿ 800ಕ್ಕೂ ಅಧಿಕ ರನ್‌ ಕಲೆಹಾಕಿದ ಬ್ಯಾಟರ್ಸ್

Author: Vinay Bhat

ಡಾನ್ ಬ್ರಾಡ್ಮನ್

ಟೆಸ್ಟ್ ಸರಣಿಯಲ್ಲಿ ಮೂರು ಬಾರಿ 800+ ರನ್ ಗಳಿಸಿದ ಏಕೈಕ ಬ್ಯಾಟರ್ ಡಾನ್ ಬ್ರಾಡ್ಮನ್. ಅವರು 1930ರಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳಲ್ಲಿ ಒಟ್ಟು 974 ರನ್‌ಗಳನ್ನು ಗಳಿಸಿದ್ದರು.

ಡಾನ್ ಬ್ರಾಡ್ಮನ್

ಡಾನ್ ಬ್ರಾಡ್ಮನ್ 1931-32ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಟೆಸ್ಟ್‌ಗಳಲ್ಲಿ 806 ರನ್‌ಗಳನ್ನು ಮತ್ತು 1936-37ರಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳಲ್ಲಿ 810 ರನ್‌ಗಳನ್ನು ಗಳಿಸಿದರು.

ವಾಲಿ ಹ್ಯಾಮಂಡ್

1928-29 ರ ಆ್ಯಶಸ್‌ನ ಐದು ಟೆಸ್ಟ್‌ಗಳಲ್ಲಿ, ಪ್ರಸಿದ್ಧ ಇಂಗ್ಲಿಷ್ ಬ್ಯಾಟರ್ ವಾಲಿ ಹ್ಯಾಮಂಡ್ 905 ರನ್ ಗಳಿಸಿದರು.

ಮಾರ್ಕ್ ಟೇಲರ್

ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್ 1989ರಲ್ಲಿ ಇಂಗ್ಲೆಂಡ್ ವಿರುದ್ಧದ ಆರು ಟೆಸ್ಟ್‌ಗಳಲ್ಲಿ 839 ರನ್ ಗಳಿಸಿದ ಸಾಧನೆ ಮಾಡಿದ್ದರು.

ನೀಲ್ ಹಾರ್ವೆ

1952-53ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಟೆಸ್ಟ್‌ಗಳಲ್ಲಿ, ನೀಲ್ ಹಾರ್ವೆ ಆಸ್ಟ್ರೇಲಿಯಾ ಪರ 834 ರನ್ ಗಳಿಸಿದ್ದರು. ಗ್ಯಾರಿ ಸೋಬರ್ಸ್ 1958 ರಲ್ಲಿ ಪಾಕ್ ವಿರುದ್ಧ 824 ರನ್ ಗಳಿಸಿದ್ದರು.

ವಿವ್ ರಿಚರ್ಡ್ಸ್

ವಿವ್ ರಿಚರ್ಡ್ಸ್ 1976 ರಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್‌ಗಳಲ್ಲಿ ಒಟ್ಟು 829 ರನ್ ಗಳಿಸಿದ್ದರು. ಹಾಗೆಯೆ ವೆಸ್ಟ್ ಇಂಡೀಸ್‌ನ ಕ್ಲೈಡ್ ವಾಲ್ಕಾಟ್ 1955 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 827 ರನ್ ಗಳಿಸಿದ್ದರು.

ಭಾರತದ ಪರ?

ಭಾರತದ ಪರ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ. ಅವರು 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಟೆಸ್ಟ್‌ಗಳಲ್ಲಿ 774 ರನ್ ಗಳಿಸಿದ್ದರು.

ಜೈಸ್ವಾಲ್ 655 ರನ್

ಇಂಗ್ಲೆಂಡ್ ವಿರುದ್ಧ ಇದುವರೆಗೆ ಆಡಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ 655 ರನ್ ಗಳಿಸಿದ್ದಾರೆ. 119 ರನ್ ಗಳಿಸಿದರೆ ಗವಾಸ್ಕರ್ ದಾಖಲೆ ಮುರಿಯಲಿದ್ದಾರೆ.