ಗೆಳೆತಿಯ ಆತ್ಮಹತ್ಯೆ, ಹೊಸ ಇನಿಂಗ್ಸ್​: ಯಾರು ಈ ಅಭಿಷೇಕ್ ಶರ್ಮಾ?

08 July 2024

PC: Google   Author: Zahir

ಝಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಯುವ ಎಡಗೈ ದಾಂಡಿಗ ಅಭಿಷೇಕ್ ಶರ್ಮಾ ಮನೆಮಾತಾಗಿದ್ದಾರೆ. ಅದು ಕೂಡ ತನ್ನ 2ನೇ ಪಂದ್ಯದ ಮೂಲಕ ಎಂಬುದು ವಿಶೇಷ.

ಚೊಚ್ಚಲ ಶತಕ

ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ 47 ಎಸೆತಗಳನ್ನು ಎದುರಿಸಿದ್ದರು. ಈ ವೇಳೆ 8 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 100 ರನ್ ಬಾರಿಸಿ ಮಿಂಚಿದ್ದರು. ಇದರ ಬೆನ್ನಲ್ಲೇ ಅಭಿಷೇಕ್ ಶರ್ಮಾ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಸೂಪರ್ ಸೆಂಚುರಿ

ಈ ಪ್ರಶ್ನೆಗೆ ಸರಳ ಉತ್ತರ ಪಂಜಾಬ್ ಮೂಲದ ಕ್ರಿಕೆಟಿಗ. ರಣಜಿಯಲ್ಲಿ ಪಂಜಾಬ್ ಪರ ಕಣಕ್ಕಿಳಿಯುವ ಅಭಿಷೇಕ್ ಶರ್ಮಾ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ.

ಯಾರು ಈ ಅಭಿ?

ಅದರಲ್ಲೂ ಐಪಿಎಲ್ 2024 ರಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಅಭಿಷೇಕ್ ಶರ್ಮಾ ಸಂಚಲನ ಸೃಷ್ಟಿಸಿದ್ದರು. 16 ಇನಿಂಗ್ಸ್​ಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಅಭಿ, 42 ಸಿಕ್ಸ್ ಹಾಗೂ 36 ಫೋರ್​ಗಳೊಂದಿಗೆ 484 ರನ್ ಚಚ್ಚಿದ್ದರು.

ಐಪಿಎಲ್ ಸ್ಟಾರ್

ಅದರಂತೆ ಇದೀಗ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿರುವ ಯುವ ದಾಂಡಿಗ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ, ದ್ವಿತೀಯ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ ತನ್ನ ಆಗಮನವನ್ನು ವಿಶ್ವಕ್ಕೆ ಸಾರಿದ್ದಾರೆ.

ಝೀರೋ-ಹೀರೋ

ಅಂದಹಾಗೆ ಐಪಿಎಲ್​ಗೂ ಮುನ್ನ ಅಭಿಷೇಕ್ ಶರ್ಮಾ ಸುದ್ದಿಯಾಗಿದ್ದು ಗರ್ಲ್​ ಫ್ರೆಂಡ್ ಕಾರಣದಿಂದ. 28ರ ಹರೆಯದ ಮಾಡೆಲ್ ತಾನಿಯಾ ಸಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದ ಅಭಿಷೇಕ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಹಲ್​​ಚಲ್ ಎಬ್ಬಿಸಿದ್ದರು.

ಪ್ರೇಮ್ ಕಹಾನಿ

ಅಚ್ಚರಿ ಎಂಬಂತೆ ಕಳೆದ ಫೆಬ್ರವರಿಯಲ್ಲಿ ತಾನಿಯಾ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾನಿಯಾ ಅವರಿಂದ ಕರೆ ಸ್ವೀಕರಿಸಿದ ಕೊನೆಯ ವ್ಯಕ್ತಿ ಎಂಬ ಕಾರಣಕ್ಕೆ ಅಭಿಷೇಕ್ ಶರ್ಮಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವಿಚಾರಣೆ ಬಳಿಕ ಯುವ ಆಟಗಾರನನ್ನು ಪ್ರಕರಣದಿಂದ ಕೈ ಬಿಡಲಾಗಿತ್ತು.

ಗೆಳೆತಿಯ ಆತ್ಮಹತ್ಯೆ

ಆ ಬಳಿಕ ಐಪಿಎಲ್​ನಲ್ಲಿ ಕಾಣಿಸಿಕೊಂಡ ಅಭಿ ಎಸ್​ಆರ್​ಹೆಚ್ ಪರ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಇದೀಗ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿರುವ ಅಭಿಷೇಕ್ ಶರ್ಮಾ 2ನೇ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ.

ಶತಕವೀರ