15-12-2023

ಹರಿದ ಶೂಗಳಲ್ಲಿ ಕ್ರಿಕೆಟ್ ಆಡುತ್ತಿರುವ ಕೋಟಿ ಒಡೆಯ ಶಾಹೀನ್ ಅಫ್ರಿದಿ

Author: Vinay Bhat

ಶಾಹೀನ್ ಅಫ್ರಿದಿ

ಪಾಕಿಸ್ತಾನದ ಯುವ ಆಟಗಾರ ಶಾಹೀನ್ ಶಾ ಅಫ್ರಿದಿ ಪ್ರಸ್ತುತ ಕಾಲದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಹರಿದ ಬೂಟು

ಶಾಹೀನ್ ಆಫ್ರಿದಿ ಬಗ್ಗೆ ಅನೇಕರಿಗೆ ತಿಳಿದಿರದ ಒಂದು ವಿಷಯವಿದೆ. ಅದೇನೆಂದರೆ ಇವರು ಬೌಲಿಂಗ್ ಮಾಡುವಾಗ ಹರಿದ ಬೂಟುಗಳನ್ನು ಧರಿಸುತ್ತಾರೆ.

ಕಾರಣವೇನು?

ಶಾಹೀನ್ ತನ್ನ ಬಲ ಪಾದದ ಶೂ ಅನ್ನು ಮುಂಭಾಗದಿಂದ ಹರಿದು ಹಾಕುತ್ತಾರೆ. ಹೀಗೆ ಮಾಡಿದರೆ ನನಗೆ ಬೌಲಿಂಗ್‌ ಮಾಡಲು ಆರಾಮ ಆಗುತ್ತದೆ ಎಂಬುದು ಶಾ ಹೇಳಿಕೆ.

ಸಂದರ್ಶನ

ಟಿ20 ಬ್ಲಾಸ್ಟ್ ವೇಳೆ ಸಂದರ್ಶನವೊಂದರಲ್ಲಿ ಶಾಹೀನ್ ಈ ಬಗ್ಗೆ ಹೇಳಿದ್ದರು. ಅವರೇ ತಮ್ಮ ಬೂಟುಗಳನ್ನು ಮುಂಭಾಗದಿಂದ ಕತ್ತರಿಸುತ್ತಾರಂತೆ.

ಕೋಟಿ ಒಡೆಯ

ಶಾಹೀನ್‌ಗೆ ಹಣದ ಕೊರತೆ ಇಲ್ಲ. ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡುವುದ್ಕೆ ಮಾತ್ರವಲ್ಲದೆ, ಅವರು ವಿಶ್ವದಾದ್ಯಂತ ಟಿ20 ಲೀಗ್‌ಗಳಿಂದ ಹಣ ಗಳಿಸುತ್ತಾರೆ.

ಕ್ಯಾಪ್ಟನ್ ಅಫ್ರಿದಿ

ಶಾಹೀನ್ ಇತ್ತೀಚೆಗಷ್ಟೇ ಪಾಕಿಸ್ತಾನದ ಟಿ20 ತಂಡದ ನಾಯಕನಾಗಿದ್ದಾರೆ. ODI ವಿಶ್ವಕಪ್ ನಂತರ, ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

ಪಾಕ್-ಆಸೀಸ್

ಪಾಕಿಸ್ತಾನ ತಂಡ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಇಲ್ಲಿ ಶಾಹೀನ್ ಸಂಚಲನ ಮೂಡಿಸುವ ನಿರೀಕ್ಷೆಯಿದೆ.