WPL 2024 ಉದ್ಘಾಟನಾ ಸಮಾರಂಭದ ಝಲಕ್ ಇಲ್ಲಿದೆ ನೋಡಿ

24 February 2024

Author: Vinay Bhat

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ WPL 2024 ರ ಉದ್ಘಾಟನಾ ಸಮಾರಂಭದಲ್ಲಿ ಕಿಂಗ್ ಖಾನ್ ಶಾರುಖ್ ನೇತೃತ್ವ ವಹಿಸಿದ್ದರು.

ಶಾರುಖ್ ಖಾನ್

ಕಬೀರ್ ಸಿಂಗ್ ಸಿನಿಮಾದ ಪ್ರಸಿದ್ಧ ಹಾಡಿಗೆ ಶಾಹಿದ್ ಕಪೂರ್ ಅವರು ಬೈಕ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟರು. ಇವರು ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸಿದರು.

ಶಾಹಿದ್ ಕಪೂರ್

ಶಾಹಿದ್ ಕಪೂರ್ ಅವರು ‘ಜಬ್ ವಿ ಮೆಟ್’ ನಗ್ಡಾ ನಗಾಡಾ ಮತ್ತು ಅವರ ಕೆಲವು ಹಿಟ್‌ ಸಿನಿಮಾಗಳ ಹಾಡುಗಳಿಗೆ ಅದ್ಭುತವಾಗಿ ನೃತ್ಯ ಮಾಡಿದರು.

ಶಾಹಿದ್ ಕಪೂರ್

ವರುಣ್ ಧವನ್ ಕೂಡ ತಮ್ಮ ನೃತ್ಯ ಕೌಶಲ್ಯದಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ವರುಣ್ ಧವನ್

ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಅವರು ತಮ್ಮ ಭೂಲ್ ಭುಲೈಯಾ 2 ಹಾಡಿನ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಧೂಳೆಬ್ಬಿಸಿದರು.

ಕಾರ್ತಿಕ್ ಆರ್ಯನ್

ಟೈಗರ್ ಶ್ರಾಫ್ ಅವರು ‘ವಿಸಲ್ ಬಾಜಾ’, ‘ಘುಂಘರೂ’ ಮತ್ತು ಇತರ ಹಾಡುಗಳಿಗೆ ನೃತ್ಯ ಮಾಡಿ ಇಡೀ ಕ್ರೀಡಾಂಗಣದಲ್ಲಿ ಧೂಳೆಬ್ಬಿಸಿದರು.

ಟೈಗರ್ ಶ್ರಾಫ್

ಸಿದ್ಧಾರ್ಥ್ ಮಲ್ಹೋತ್ರಾ ‘ಶೇರ್ಷಾ’ ಚಿತ್ರದ ಚಾರ್ಟ್‌ಬಸ್ಟರ್ ಹಾಡಿನ ಮೂಲಕ ಅದ್ಧೂರಿ ಎಂಟ್ರಿ ನೀಡಿದರು. ಇವರ ಕಾಸ್ಟ್ಯೂಮ್ ಕೂಡ ಸಖತ್ ಆಗಿತ್ತು.

ಸಿದ್ಧಾರ್ಥ್ ಮಲ್ಹೋತ್ರಾ

WPL 2024 ರ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರ ವಿರುದ್ಧ ಹರ್ಮನ್ ಪ್ರೀತ್ ಅವರ ಮುಂಬೈ ಇಂಡಿಯನ್ಸ್ ರೋಚಕ ಜಯ ಸಾಧಿಸಿತು.

WPL 2024