ಒಡಿಐ ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ  ಎಲ್ಲಾ ನಾಯಕರ ಪಟ್ಟಿ ಇಲ್ಲಿದೆ.

07 September 2023

Pic credit - Google

ಎಸ್ ವೆಂಕಟರಾಘವನ್ ಅವರು 1975 ಮತ್ತು 1979 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು.

ಎಸ್ ವೆಂಕಟರಾಘವನ್

Pic credit - Google

ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ 1983 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿತ್ತು. ಇದೇ ಕಪಿಲ್ 1987 ರ ವಿಶ್ವಕಪ್‌ನಲ್ಲಿಯೂ ತಂಡದ ಸಾರಥ್ಯವಹಿಸಿದ್ದರು.

ಕಪಿಲ್ ದೇವ್

Pic credit - Google

ಮೊಹಮ್ಮದ್ ಅಜರುದ್ದೀನ್ 1992, 1996 ಮತ್ತು 1999 ರ 3 ವಿಶ್ವಕಪ್ ಆವೃತ್ತಿಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು.

ಮೊಹಮ್ಮದ್ ಅಜರುದ್ದೀನ್

Pic credit - Google

ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 2003 ರ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಕಪ್ ಗೆಲ್ಲುಲು ಸಾಧ್ಯವಾಗಲಿಲ್ಲ.

ಸೌರವ್ ಗಂಗೂಲಿ

Pic credit - Google

2007ರ ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದಿದ್ದರು. ಆದರೆ ಭಾರತ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು.

ರಾಹುಲ್ ದ್ರಾವಿಡ್

Pic credit - Google

2011 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ನಾಯಕತ್ವವಹಿಸಿದ್ದ ಧೋನಿ, 28 ವರ್ಷಗಳ ನಂತರ ಭಾರತವನ್ನು ಚಾಂಪಿಯನ್ ಮಾಡಿದ್ದರು. ಇವರ ನಾಯಕತ್ವದಲ್ಲೇ ಭಾರತ 2015ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಪ್ರವೇಶಿಸಿತ್ತು.

ಎಂಎಸ್ ಧೋನಿ

Pic credit - Google

2019 ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಭಾರತವನ್ನು ಮುನ್ನಡೆಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಭಾರತ ಕಾಲಿ ಕೈಯಲ್ಲಿ ತವರಿಗೆ ವಾಪಸ್ಸಾಗಿತ್ತು.

ವಿರಾಟ್ ಕೊಹ್ಲಿ

Pic credit - Google

ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಮೊದಲ ಬಾರಿಗೆ ಮುನ್ನಡೆಸುತ್ತಿದ್ದು, 12 ವರ್ಷಗಳ ಕಾಯುವಿಕೆಗೆ ಹಿಟ್​ಮ್ಯಾನ್ ಅಂತ್ಯ ಹಾಡುತ್ತಾರಾ? ಕಾದುನೋಡಬೇಕಿದೆ.

ರೋಹಿತ್ ಶರ್ಮಾ

Pic credit - Google