ವಿಶ್ವದ ಟಾಪ್ 10 ಅಪಾಯಕಾರಿ ನಾಯಿ ತಳಿಗಳು

ಪಿಟ್ ಬುಲ್: ವಿಶ್ವದ ಅತ್ಯಂತ ಅಪಾಯಕಾರಿ ನಾಯಿ ತಳಿ ಇದಾಗಿದ್ದು, ಅಮೆರಿಕ ಮೂಲದ್ದಾಗಿದೆ. ಒಂದೇ ವರ್ಷದಲ್ಲಿ ಅಮೆರಿಕದಲ್ಲಿ ಇದುವರೆಗೆ 22 ಜನರನ್ನು ಕೊಂದಿದೆ. ಅನೇಕ ದೇಶಗಳಲ್ಲಿ ಪಿಟ್ ಬುಲ್ ಸಾಕುವುದನ್ನು ನಿಷೇಧಿಸಲಾಗಿದೆ.

ರೊಟ್ವೀಲರ್: ಹೆಚ್ಚು ಬಲಶಾಲಿಯಾಗಿರುವ ಈ ನಾಯಿ ಅಪಾಯಕಾರಿಯಾಗಿದೆ. ಜರ್ಮನಿ ಮೂಲದ್ದಾಗಿದೆ, ಇದರ ಕಚ್ಚುವಿಕೆಯು 1,460 ನ್ಯೂಟನ್ಗಳ ಬಲ ಹೊಂದಿದೆ.

ಜರ್ಮನ್ ಶೆಫರ್ಡ್: ಅತ್ಯಂತ ಪ್ರಸಿದ್ಧ ತಳಿ ಇದಾಗಿದ್ದು, ಜರ್ಮನಿ ಮೂಲದ್ದಾಗಿದೆ. ಇದರ ಕಡಿತವು 1,060 ನ್ಯೂಟನ್‌ಗಳ ಒಟ್ಟು ಬಲವನ್ನು ಹೊಂದಿದೆ. ಸಾಮಾನ್ಯವಾಗಿ ಪೊಲೀಸ್ ಇಲಾಖೆ ಹಾಗೂ ಒಂದಷ್ಟು ಶ್ವಾನ ಪ್ರಿಯರ ಮನೆಯಲ್ಲಿ ಕಾಣಸಿಗುತ್ತದೆ.

ಡೋಬರ್ಮನ್ ಪಿನ್ಷರ್: ಪೊಲೀಸ್ ಇಲಾಖೆಗಳಲ್ಲಿ ಈ ನಾಯಿಯನ್ನು ಬಳಕೆ ಮಾಡಲಾಗುತ್ತಿದೆ. ಜರ್ಮನಿ ಮೂಲದ್ದಾಗಿದೆ. ಅಪರಿಚಿತ ಜನರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತದೆ.  ಇತ್ತೀಚಿನ ವರ್ಷಗಳಲ್ಲಿ ಈ ತಳಿಯ ಜನಪ್ರಿಯತೆಯು ಹೆಚ್ಚಾಗಿದೆ.

ಬುಲ್ಮಾಸ್ಟಿಫ್: 130 ಪೌಂಡ್‌ ತೂಕ ಹೊಂದುವ ಈ ನಾಯಿ ಆಕ್ರಮಣಕಾರಿ ಸ್ವಭಾವ ಹೊಂದಿದೆ. ಯುಕೆ ಮೂಲದ್ದಾಗಿದೆ. ತರಬೇತಿ ನೀಡಿದ್ದರೆ ಮಾಲೀಕರು ಹೇಳಿದಂತೆ ಕೇಳುತ್ತವೆ. ಇಲ್ಲವಾದಲ್ಲಿ ಅಪಾಯಕಾರಿ. ಸಣ್ಣ ಪ್ರಾಣಿಗಳ ಮೇಲೆ ಸುಲಭವಾಗಿ ಆಕ್ರಮಣ ಮಾಡುತ್ತವೆ.

ಹಸ್ಕಿ: ಹೆಚ್ಚಿನ ಶಕ್ತಿ ಹೊಂದಿರುವ ಹಸ್ಕಿ ನಾಯಿಯನ್ನು ಮನೆಯಲ್ಲಿ ಸಾಕುವುದು ಅಪಾಯಕಾರಿ. ಇದು ಸೈಬೀರಿಯಾ ಮೂಲದ್ದಾಗಿದೆ. ಅಮೆರಿಕದಲ್ಲಿ 15 ಜನರ ಸಾವಿಗೆ ಹಸ್ಕಿ ತಳಿಯ ನಾಯಿಗಳು ಕಾರಣ ಎಂದು ಶಂಕಿಸಲಾಗಿದೆ.

ಅಲಸ್ಕನ್ ಮಲಾಮೂಟ್: ಈ ನಾಯಿ ಸ್ಲೆಡ್ ಡಾಗ್ಸ್ ಎಂಬ ಹೆಸರಿನೊಂದಿಗೆ ಪ್ರಪಂಚದಲ್ಲಿ ಪ್ರಸಿದ್ಧವಾಗಿದೆ. ಯುಎಸ್ಎ ಮೂಲದ್ದಾಗಿದೆ. ದಾಳಿ ಮಾಡುವುದರಲ್ಲಿ ಪಂಟರ್. ಅಮೆರಿಕಾದಲ್ಲಿ ಐವರ ಮೇಲೆ ಮಾರಣಾಂತಿಕ ದಾಳಿ ನಡೆಸಿವೆ.

ವುಲ್ಫ್ ಹೈಬ್ರಿಡ್: ತೋಳಗಳಿಗೆ ಹೋಲುವ ನಾಯಿ ಇದಾಗಿದೆ. ಇಥಿಯೋಪಿಯಾ ಮೂಲದ್ದಾಗಿದೆ. ಈ ನಾಯಿಗಳನ್ನು ಆನುವಂಶಿಕವಾಗಿ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಇವುಗಳನ್ನು ಸಾಕುವುದು ಕಾನೂನು ಬಾಹಿರವಾಗಿದೆ.

ಬಾಕ್ಸರ್: ಬೇಟೆಯಾಡುವ ನಾಯಿ ಇದಾಗಿದೆ. ಕಾವಲು ನಾಯಿಯೂ ಹೌದು. ಜರ್ಮನ್ ಮೂಲದ್ದಾಗಿದೆ. ತುಂಬಾ ಶಕ್ತಿಯುತವಾದ ದವಡೆಗಳನ್ನು ಹೊಂದಿರುವ ಈ ನಾಯಿಯ ಕಡಿತವೂ ಭೀಕರವಾಗಿರುತ್ತದೆ.

ಗ್ರೇಟ್ ಡೇನ್: ಈ ನಾಯಿ ಸೌಮ್ಯ ಸ್ವಭಾವದ್ದಾಗಿದೆ. ಆದರೆ ಸರಿಯಾಗಿ ತರಬೇತಿ ನೀಡದಿದ್ದರೆ ಅತ್ಯಂತ ಅಪಾಯಕಾರಿ. ಜರ್ಮನ್ ಮೂಲದ್ದಾಗಿದೆ. ಇದನ್ನು ಕೊಲ್ಲುವ ಯಂತ್ರ ಎಂದೂ ಕರೆಯುತ್ತಾರೆ. ಒಟ್ಟು 86 ಸೆಂಟಿಮೀಟರ್ ಉದ್ದ ಮತ್ತು 200 ಪೌಂಡ್ ತೂಕವನ್ನು ಹೊಂದಿದೆ.