ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಸೂಕ್ತ ಆಹಾರಗಳು

ಒತ್ತಡದ ಜೀವನದ ಶೈಲಿ ಕಣ್ಣಿನ ಸುತ್ತಲಿನ ಕಪ್ಪು ಕಲೆಗೆ ಪ್ರಮುಖ ಕಾರಣ.

ಸರಿಯಾದ ನಿದ್ದೆಯ ಹೊರತಾಗಿಯೂ ಆಹಾರ ಕ್ರಮಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಟೊಮೆಟೋ: ರಕ್ತ ಪರಿಚಲನೆಯನ್ನು ಸುಧಾರಿಸಿ, ಕಣ್ಣಿನ ಸುತ್ತಲಿನ ಕಪ್ಪು ಕಲೆಗೆ ಚಿಕಿತ್ಸೆ ನೀಡುತ್ತದೆ.

ಸೌತೆ ಕಾಯಿ ಸೇವನೆ ಕಾಲಜನ್​​​ ಉತ್ಪಾದನೆಯನ್ನು ಹೆಚ್ಚಿಸಿ, ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. 

ಕಲ್ಲಂಗಡಿ ಹಣ್ಣು: ಕಣ್ಣಿನ ಆರೋಗ್ಯವನ್ನು ಉತ್ತೇಜಿಸುವ ಬೀಟಾ ಕ್ಯಾರೋಟಿನ್​​ ಅಂಶ ಇದರಲ್ಲಿ ಹೇರಳವಾಗಿದೆ.

ಬೆರ್ರಿ ಹಣ್ಣು: ವಿಟಮಿನ್​​​ ಕೆ,ಸಿ ಹಾಗೂ ಒಮೆಗಾ 3 ಇದರಲ್ಲಿ ಹೇರಳವಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಹಸಿರು ತರಕಾರಿಗಳು: ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಹಾಗೂ ಚರ್ಮದ ಆರೋಗ್ಯ ಕಾಪಾಡುತ್ತದೆ.

ಕಿತ್ತಳೆ ಹಣ್ಣು: ಇದರಲ್ಲಿ ವಿಟಮಿನ್​​ ಸಿ, ಎ ಹೇರಳವಾಗಿದ್ದು, ಕಾಲಜನ್​​ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಬೀಟ್ರೂಟ್​: ದೇಹವನ್ನು ಶುದ್ಧೀಕರಿಸಲು ಹಾಗೂ ಆರೋಗ್ಯಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿ ಹೇರಳವಾಗಿದೆ.