ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಒತ್ತಡದ ಜೀವನಶೈಲಿಯೂ ಕಣ್ಣಿನ ಸುತ್ತಲಿನ ಕಪ್ಪು ಕಲೆಗೆ ಒಂದು ಕಾರಣ ಎಂದು ಹೇಳಬಹುದು.
ಸರಿಯಾದ ನಿದ್ದೆ ಇಲ್ಲದಿರುವುದು, ನಿದ್ರಾಹೀನತೆಯಿಂದಾಗಿ ಡಾರ್ಕ್ ಸರ್ಕಲ್ ಉಂಟಾಗುತ್ತದೆ.
ಆದರೆ ಸರಿಯಾದ ನಿದ್ದೆ ಹಾಗೂ ಈ ಸಿಂಪಲ್ ಟಿಪ್ಸ್ ಬಳಸಿ ಕಪ್ಪು ಕಲೆ ನಿವಾರಿಸಬಹುದು.
ಗ್ರೀನ್ ಟೀ ಬ್ಯಾಗ್ ನೆನೆಸಿ, ಅವುಗಳನ್ನು 10-15ನಿಮಿಷಗಳ ಕಾಲ ಕಣ್ಣಿನ ಮೇಲೆ ಇಡಿ.
ಸೌತೆ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ 15 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟು ಮಲಗಿ.
ಹತ್ತಿಯ ಉಂಡೆಯನ್ನು ಹಾಲಿನಲ್ಲಿ ಅದ್ದಿ ಕಣ್ಣಿನ ಮೇಲೆ ಕೆಲ ನಿಮಿಷಗಳ ವರೆಗೆ ಮಸಾಜ್ ಮಾಡಿ.
ಟೊಮೆಟೋ ರಸ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಕಣ್ಣಿನ ಸುತ್ತ ಹಚ್ಚಿ, ಕೆಲ ನಿಮಿಷಗಳ ವರೆಗೆ ವಿಶ್ರಾಂತಿ ಪಡೆದುಕೊಳ್ಳಿ.
ಅಲೋವೆರಾ ಜೆಲ್ನ್ನು ಕಣ್ಣಿನ ಕೆಳ ಭಾಗಕ್ಕೆ ಹಚ್ಚಿ ಕೆಲ ನಿಮಿಷಗಳ ವರೆಗೆ ಮಸಾಜ್ ಮಾಡಿ.