ಡೇಟಿಂಗ್ ಆ್ಯಪ್ ಬಳಸುವ ಮುನ್ನ ನಿಮ್ಮ ಸುರಕ್ಷತೆಯ ಬಗ್ಗೆ ಎಚ್ಚರವಹಿಸಿ

ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆ್ಯಪ್ ಬಳಸಿ ಸಂಗಾತಿಯನ್ನು ಆಯ್ಕೆ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ.

ಆದರೆ ನೀವು ಡೇಟಿಂಗ್ ಆ್ಯಪ್ ಬಳಸುವ ಮುನ್ನ ನಿಮ್ಮ ಸುರಕ್ಷತೆಯ ಬಗ್ಗೆ ಎಚ್ಚರವಹಿಸಿ.

ನೀವು ಯಾವ ರೀತಿ ಡೇಟಿಂಗ್ ಆ್ಯಪ್ ನಲ್ಲಿ ಯಾವುದೇ ತೊಂದರೆ ಇಲ್ಲದೇ ಸಂಗಾತಿಯನ್ನು ಆಯ್ಕೆ ಮಾಡಬಹುದಾಗಿದೆ.

ನಿಮ್ಮ ಸಾಮಾಜಿಕ  ಜಾಲತಾಣಗಳ ಖಾತೆಗೆ ನೀವು ನಿಮ್ಮ ಡೇಟಿಂಗ್ ಆ್ಯಪ್ನ ಲಿಂಕ್ ಸೇರಿಸಬೇಡಿ, ಗೌಪ್ಯತೆಯನ್ನು ಕಾಪಾಡಿ.

ನಿಮ್ಮ ವಿಳಾಸಗಳನ್ನು  ಹಾಕಬೇಡಿ. ಬದಲಾಗಿ ಇದರಲ್ಲಿ ನಿಮ್ಮ ಲೋಕೆಶನ್ ಆಯ್ಕೆಯನ್ನು ಆಫ್ ಮಾಡಿ ಇಟ್ಟುಕೊಳ್ಳಿ.

ಡೇಟಿಂಗ್ ಆ್ಯಪ್ ನಲ್ಲಿ ಹೊಸಬರ ಪರಿಚಯ ಆದಾಗ, ಅವರು ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದರೆ ತಕ್ಷಣ ಆ ಅಕೌಂಟ್ ನ್ನು ರಿಪೋರ್ಟ್ ಮಾಡಿ.