ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಮತ್ತೆ ಹಾಲಿವುಡ್ ಕಡೆಗೆ ಹೊರಟಿದ್ದಾರೆ. ಯಾವುದು ಸಿನಿಮಾ?

10 Feb 2024

Author : Manjunatha

ನಟಿ ದೀಪಿಕಾ ಪಡುಕೋಣೆ ಬಾಲಿವುಡ್​ನ ಸ್ಟಾರ್ ನಟಿ. ಬಾಲಿವುಡ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಸಹ ಹೌದು.

ಬಾಲಿವುಡ್​ನ ಸ್ಟಾರ್ ನಟಿ

ಹಲವು ಸ್ಟಾರ್ ನಟರೊಟ್ಟಿಗೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಲೇ ಇದ್ದಾರೆ. ಅವರ ಸಿನಿಮಾಗಳು ಯಶಸ್ಸು ಸಹ ಗಳಿಸುತ್ತಿವೆ.

ದೀಪಿಕಾ ಪಡುಕೋಣೆ

ಬಾಲಿವುಡ್​ನಲ್ಲಿ ಬಹಳಷ್ಟು ಬ್ಯುಸಿಯಾಗಿರುವಾಗಲೇ ಹಾಲಿವುಡ್​ನತ್ತ ಮತ್ತೊಮ್ಮೆ ಪಯಣ ಆರಂಭಿಸಿದ್ದಾರೆ ನಟಿ ದೀಪಿಕಾ ಪಡುಕೋಣೆ.

ಹಾಲಿವುಡ್​ನತ್ತ ಪಯಣ

ಈ ಹಿಂದೆ ಜನಪ್ರಿಯ ಹಾಲಿವುಡ್ ಸಿನಿಮಾ ತ್ರಿಬಲ್ ಎಕ್ಸ್ ಸಿನಿಮಾದಲ್ಲಿ ಹಲವು ಹಾಲಿವುಡ್ ತಾರೆಯರ ಜೊತೆ ದೀಪಿಕಾ ಪಡುಕೋಣೆ ನಟಿಸಿದ್ದರು.

ತ್ರಿಬಲ್ ಎಕ್ಸ್ ಸಿನಿಮಾ

2017ರಲ್ಲಿ ಬಿಡುಗಡೆ ಆದ ಆ ಆಕ್ಷನ್ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಆ ಸಿನಿಮಾದ ಬಳಿಕ ದೀಪಿಕಾಗೆ ಮತ್ಯಾವುದೇ ಹೊಸ ಹಾಲಿವುಡ್ ಅವಕಾಶವೂ ಬಂದಿರಲಿಲ್ಲ.

ಅವಕಾಶ ಬಂದಿರಲಿಲ್ಲ

ಆದರೆ ಈಗ ಮತ್ತೊಮ್ಮೆ ದೀಪಿಕಾ ಪಡುಕೋಣೆಗೆ ಹಾಲಿವುಡ್​ನಿಂದ ಬುಲಾವ್ ಬಂದಿದೆ ಎನ್ನಲಾಗುತ್ತಿದೆ. ಈ ಬಾರಿ ತ್ರಿಬಲ್ ಎಕ್ಸ್ ಪ್ರಾಂಚೈಸ್​ಗಿಂತಲೂ ದೊಡ್ಡ ಪ್ರಾಂಚೈಸ್​ನಲ್ಲಿ ದೀಪಿಕಾ ನಟಿಸಲಿದ್ದಾರೆ.

ಹಾಲಿವುಡ್​ ಬುಲಾವ್

ಭಾರಿ ದೊಡ್ಡ ನಿರ್ಮಾಣ ಸಂಸ್ಥೆ ನಿರ್ಮಿಸಲಿರುವ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇದು ಅವರಿಗೆ ಎರಡನೇ ಹಾಲಿವುಡ್ ಸಿನಿಮಾ.

ಸೈಂಟಿಫಿಕ್ ಸಿನಿಮಾ

ದೀಪಿಕಾ ಪಡುಕೋಣೆ ಪ್ರಸ್ತುತ ಪ್ರಭಾಸ್ ನಟನೆಯ ‘ಕಲ್ಕಿ’ ಹಾಗೂ ಹಿಂದಿಯ ‘ಸಿಂಘಂ ರಿಟರ್ನ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಎರಡು ಸಿನಿಮಾ

ಈ ಎರಡೂ ಸಿನಿಮಾಗಳ ಬಳಿಕ ‘ಬ್ರಹ್ಮಾಸ್ತ್ರ’ ಸಿನಿಮಾದ ಎರಡನೇ ಭಾಗದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ಒಂದು ತಮಿಳು ಸಿನಿಮಾದಲ್ಲಿಯೂ ದೀಪಿಕಾ ನಟಿಸಲಿದ್ದಾರೆ.

‘ಬ್ರಹ್ಮಾಸ್ತ್ರ’ ಸಿನಿಮಾ

ದರ್ಶನ್ ಹುಟ್ಟುಹಬ್ಬಕ್ಕೆ ಇಶಾನಿ ಬಿಡುಗಡೆ ಮಾಡಲಿದ್ದಾರೆ ಹೊಸ ಹಾಡೊಂದನ್ನು