Dharwad 26th National Youth Festival

        ಧಾರವಾಡದಲ್ಲಿ 26ನೇ ಯುವ ಜನೋತ್ಸವ

Know Your Army ವಿಶೇಷ ಮಳಿಗೆ

Dharwad 26th National Youth Festival

ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವ ಜನೋತ್ಸವ ನಡೆಯುತ್ತಿದೆ. ಕೆಸಿಡಿ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ  ವಸ್ತು ಪ್ರದರ್ಶನದಲ್ಲಿ ಭಾರತೀಯ ಸೈನ್ಯದ ಕುರಿತ ಮಳಿಗೆ ಗಮನ ಸೆಳೆಯುತ್ತಿದೆ.

Dharwad 26th National Youth Festival

ದೇಶದ ಸಮರ್ಥ ಪಡೆಗಳ ಬಗ್ಗೆ ತಿಳಿದುಕೊಳ್ಳಲು, ರಾಷ್ಟ್ರದ ಸಾರ್ವಭೌಮತೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಹೆಮ್ಮೆ ಮೂಡಿಸುವ ಉದ್ದೇಶದಿಂದ ಈ ಮಳಿಗೆಗಳನ್ನು ತೆರೆಯಲಾಗಿದೆ.

Dharwad 26th National Youth Festival

ಮಳಿಗೆಗಳನ್ನು ಎರಡು ಭಾಗವಾಗಿ ವಿಂಗಡಿಸಲಾಗಿದ್ದು, ಸೇನೆಯಲ್ಲಿ ಬಳಸುವ ಆಯುಧಗಳ ಪ್ರದರ್ಶನ ಮತ್ತು ಅಗ್ನಿ ವೀರ ಸ್ಕೀಮ್ ಪ್ರವೇಶದ ಕುರಿತು ಮಾಹಿತಿ ನೀಡಲಾಗುತ್ತಿದೆ.

Dharwad 26th National Youth Festival

ಆಯುಧಗಳ ಪ್ರದರ್ಶನ ವಿಭಾಗದಲ್ಲಿ ವಿಶೇಷವಾಗಿ 7.62 ಎಂ.ಎಂ. ಸಿಂಗಲ್ ಅಸಾಲ್ಟ್ ರೈಫಲ್, 7.62 ಎಂಎಂ, ಎಲ್​ಎಮ್​ಜಿ, ಎಕೆ-47, ಸ್ನೈಪರ್ ಡಿಎಸ್ಆರ್, ಎಮ್​ಎಮ್​ಜಿ, ರಾಕೆಟ್ ಲಾಂಚರ್​​ಗಳನ್ನು ಮತ್ತದರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಬಹುದು

Dharwad 26th National Youth Festival

ಸೇನಾ ಪಡೆಗಳು ರಾತ್ರಿ ಮತ್ತು ಹಗಲು ಬಳಸುವ ಕಣ್ಗಾವಲು ಉಪಕರಣಗಳನ್ನು ಪ್ರದರ್ಶಿಸಲಿದ್ದಾರೆ. ದೇಶ ರಕ್ಷಣೆಯಲ್ಲಿ ಕಣ್ಗಾವಲು ವ್ಯವಸ್ಥೆ ಅತ್ಯಂತ ಮಹತ್ವ ಪಡೆದಿದೆ.

Dharwad 26th National Youth Festival

ಸೇನಾ ಪಡೆಗಳಿಗೆ ಸೇರ್ಪಡೆಯಾಗಲು ಅಗ್ನಿವೀರ್ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಇದರ ರೂಪು ರೇಷೆಗಳ ಮತ್ತು ಸೇನೆಗೆ ಸೇರ್ಪಡೆಯಾಗುವ ಹಂತಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

Dharwad 26th National Youth Festival

ಅಗ್ನಿವೀರ ಕುರಿತಂತೆ ಅಲ್ಲಲ್ಲಿ ಹರಡಿರುವ ತಪ್ಪು ಗ್ರಹಿಕೆ ತೊಡೆದು ಹಾಕುವ ಉದ್ದೇಶದಿಂದ ಈ ಮಳಿಗೆ ತೆರೆಯಲಾಗಿದೆ. ಸೇವೆಯ ನಂತರ ಯುವಕರಿಗೆ ಇರುವ ಉದ್ಯೋಗಾವಕಾಶ ಇತ್ಯಾದಿ ಮಾಹಿತಿ ಲಭ್ಯವಿದೆ. (ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ)

Webstory last slide