ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ಮಧುಮೇಹ ತಡೆಗಟ್ಟಬಹುದು. ಆದ್ದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುವ ಹಣ್ಣುಗಳು ಇಲ್ಲಿವೆ.

ಸಂಶೋಧನೆಯ ಪ್ರಕಾರ ದ್ರಾಕ್ಷಿಯಲ್ಲಿ ಪೋಷಕಾಂಶ ಸಮೃದ್ದವಾಗಿರುವುದರಿಂದ, ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸುತ್ತದೆ ಎಂದು ತಿಳಿದುಬಂದಿದೆ. 

ದಾಳಿಂಬೆಯು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಗ್ಲೈಸೆಮಿಕ್ ಲೋಡ್ ಹೊಂದಿದ್ದು, ಮಧುಮೇಹ ಇರುವವರಿಗೆ ಇದು ಪ್ರಯೋಜನಕಾರಿ ಹಣ್ಣಾಗಿದೆ. 

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

ಕಿವಿ ಹಣ್ಣಿನಲ್ಲಿ ವಿಟಮಿನ್‌ ಇ, ಕೆ ಹಾಗೂ ಪೊಟಾಷ್ಯಿಯಂ ಸಮೃದ್ದವಾಗಿದೆ. ಜೊತೆಗೆ ಸಕ್ಕರೆ ಅಂಶ ಕೂಡ ಕಡಿಮೆ ಇದೆ. 

ಬ್ಲ್ಯಾಕ್‌ ಬೆರ್ರಿ, ಬ್ಲೂ ಬೆರ್ರಿ, ಸ್ಟ್ರಾಬೆರ್ರಿ ಈ ರೀತಿಯ ಬೆರ್ರಿ ಹಣ್ಣುಗಳಲ್ಲಿ ಆ್ಯಂಟಿಆಕ್ಸಿಡೆಂಟ್,ವಿಟಮಿನ್‌ಗಳಿದ್ದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

ಸೇಬು ಮಿತಿಯಲ್ಲಿ ತಿನ್ನಬಹುದು. ಇದರಲ್ಲಿರುವ ಪೋಷಕಾಂಶಗಳು ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು.