ಆರೋಗ್ಯವನ್ನು ಕಾಪಾಡುವಲ್ಲಿ ನೀವು ಸೇವಿಸುವ ಆಹಾರಗಳು ಹಾಗೂ ಆರೋಗ್ಯಕರ ಜೀರ್ಣಕ್ರಿಯೆಯು ಪ್ರಮುಖವಾಗಿರುತ್ತದೆ.
ಜೀರ್ಣಕಾರಿ ಕಿಣ್ವಗಳು ಮುಖ್ಯವಾಗಿ ಅಮೈಲೇಸ್, ಲಿಪೇಸ್, ಪೆಪ್ಸಿನ್, ಟ್ರಿಪ್ಸಿನ್ ಮತ್ತು ಪ್ಯಾಂಕ್ರಿಯಾಟಿಕ್ ಲಿಪೇಸ್ನ್ನು ಒಳಗೊಂಡಿರುತ್ತದೆ.
ಕೆಫೀರ್ ಹುದುಗಿಸಿದ ಹಾಲಿನ ಉತ್ಪನ್ನಗಳಾಗಿರುವುದರಿಂದ, ನಿಮ್ಮ ಆಹಾರ ಕ್ರಮದಲ್ಲಿ ರೂಡಿಸಿ. ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯಕ.
ಶುಂಠಿಯಲ್ಲಿ ಜೀರ್ಣಕಾರಿ ಕಿಣ್ವಗಳು ಹೇರಳವಾಗಿದ್ದು, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.
ಮಿಸೊ ಜಪಾನೀ ಭಕ್ಷ್ಯಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದನ್ನು ಸೋಯಾ ಬೀನ್ನಿಂದ ತಯಾರಿಸಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಕಿಮ್ ಚಿ ಹೆಚ್ಚಾಗಿ ಕೊರಿಯನ್ ಭಕ್ಷ್ಯಗಳಲ್ಲಿ ಕಾಣಬಹುದು. ಇದನ್ನು ಕ್ಯಾಬೆಜ್ ಬಳಸಿ ತಯಾರಿಸಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.
ಪಪ್ಪಾಯಿ ಹಣ್ಣು ಜೀರ್ಣಕಾರಿ ಕಿಣ್ವಗಳ ಸಮೃದ್ಧ ಮೂಲವಾಗಿದ್ದು, ಇದು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯಕವಾಗಿದೆ.
ಜೇನುತುಪ್ಪದಲ್ಲಿ ನಿಮ್ಮ ಆರೋಗ್ಯಕ್ಕೆ ಬೇಕಾಗುವ ಸಾಕಷ್ಟು ಪ್ರಯೋಜನಕಾರಿ ಅಂಶಗಳಿದ್ದು, ಜೊತೆಗೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.