ದೀಪಾವಳಿ ಆಚರಣೆ ಭಾರತ ಮತ್ತು ವಿದೇಶಗಳಲ್ಲಿ
ಉತ್ತರ ಭಾರತ ರಾಮ ಮತ್ತು ಸೀತೆ 14 ವರ್ಷ ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಮರಳಿದ್ದು ದೀಪಾವಳಿದಂದೇ ಎಂದು ಉತ್ತರ ಭಾರತದ ಜನರು ನಂಬಿದ್ದಾರೆ
ಪಶ್ಚಿಮ ಬಂಗಾಳ ಪಶ್ಚಿಮ ಬಂಗಾಳದಲ್ಲಿ ದೀಪಾವಳಿಗೆ ದುರ್ಗಾ ಮಾತೆಯನ್ನು ಆರಾಧಿಸುತ್ತಾರೆ.
ಗೋವಾ ದೀಪಾವಳಿ ಮೊದಲ ದಿನ ನರಕ ಚತುರ್ದಶಿಯಂದು ನರಕಾಸುರನನ್ನು ದಹನ ಮಾಡುವ ಮುಖಾಂತರ ದೀಪಾವಳಿಯನ್ನು ಅದ್ಧೂರಿಯಗಿ ಆಚರಿಸುತ್ತಾರೆ
ಫಿಜಿ ದಕ್ಷಿಣ ಪೆಸಿಫಿಕ್ ನ ಫಜಿ ದೇಶದಲ್ಲಿ ದೀಪಾವಳಿ ಹಬ್ಬದಂದು ಸರ್ಕಾರಿ ರಜೆ ಇರುತ್ತದೆ. ಈ ದಿನದಂದು ಇಡೀ ದೇಶ ತಮ್ಮ ಮನೆ, ನಗರ ಮತ್ತು ಊರನ್ನು ದೀಪಗಳಿಂದ ಅಲಂಕರಿಸಿ ಬಹಳಷ್ಟು ವಿಜೃಂಬಣೆಯಿಂದ ಆಚರಿಸುತ್ತಾರೆ.
ಯುಎಸ್ ಎ ಅಮೇರಿಕದಲ್ಲಿ ಸಾಕಷ್ಟು ಹಿಂದೂಗಳಿದ್ದು, ದೀಪಾವಳಿಯನ್ನು ಬಹಳ ಜೋರಾಗಿ ಆಚರಿಸುತ್ತಾರೆ. ದೀಪಾವಳಿಯಂದು ಮೆರವಣಿಗೆಗಳು, ಸಾಮೂಹಿಕ ಭೋಜನ ಮತ್ತು ಸಿಡಿಮದ್ದು ಪ್ರದರ್ಶನ ನಡೆಯುತ್ತದೆ.
ದುಬೈ ದುಬೈನಲ್ಲಿ ದೀಪಾವಳಿ ಬಹಷ್ಟು ರಂಗಿನಿಂದ ಕೂಡಿರುತ್ತದೆ. ಎಲ್ಲಕಡೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿರುತ್ತದೆ.
ಸಿಂಗಾಪುರ ಸಿಂಗಾಪುರನಲ್ಲಿ ದೀಪಾವಳಿ ದಿನದಂದು ಸರ್ಕಾರಿ ರಜೆ ಎಂದು ಘೋಷಣೆ ಮಾಡಿದ್ದಾರೆ. ನಗರದಲ್ಲಿ ಸಂಗೀತ ಕಾರ್ಯಕ್ರಮಗಳು, ಲೈಟ್ ಶೋ ಏರ್ಪಡಿಸಲಾಗುತ್ತದೆ
ಆಸ್ಟ್ರೇಲಿಯಾ ಮೆಲ್ಬೋರ್ನ್ ಮತ್ತು ಬ್ರಿಸ್ಬೇನ್ ನಲ್ಲಿ ಲೈಟ್ ಶೋ, ಸಾಂಸ್ಕೃತಿಕ ನೃತ್ಯ ಮತ್ತು ಸಂಗೀತ ಮತ್ತು ಲೈವ್ ಕಾರ್ಯಕ್ರಮಗಳನ್ನು ಸೇರ್ಪಡಿಸಲಾಗುತ್ತದೆ.
ನೇಪಾಳ ನರಕಾಸೂರನನ್ನು ಸಂಹರಿಸಿದ ಶ್ರೀಕೃಷ್ಣನನ್ನು ಆರಾಧಿಸುತ್ತಾರೆ. 5 ದಿನಗಳ ಸಂಭ್ರಮಾಚರಣೆಯಲ್ಲಿ ಪ್ರಾಣಿಗಳನ್ನೂ ಪೂಜಿಸುತ್ತಾರೆ. 5 ದಿನಗಳಲ್ಲಿ 3 ದಿನ ಕುಕುರ್ ತಿಹಾರ್ ಅಥವಾ ಶ್ವಾನಗಳ ದಿನ ಎಂದು ಆಚರಿಸುತ್ತಾರೆ.
ಇಂಗ್ಲೇಂಡ್ ಇಂಗ್ಲೇಂಡ್ನಲ್ಲಿ ಜನರು ದೀಪಾವಳಿಯನ್ನು ಒಟ್ಟಾಗಿ ಎಲ್ಲರೂ ಒಂದೇ ಎಂಬ ಭಾವದಿಂದ ಆಚರಿಸುತ್ತಾರೆ. ದೀಪಾವಳಿಯಲ್ಲಿ ನಡೆಯುವ ಲೈಟ್ ಶೋ ಬಹಳ ಪ್ರಸಿದ್ಧಿ ಪಡೆದಿದೆ.