ಇಡ್ಲಿ, ದೋಸೆ, ಉತ್ತಪ್ಪ ಮತ್ತು ಪೂರಿಗಳ ರುಚಿಯನ್ನು ಹೆಚ್ಚಿಸುತ್ತದೆ ಈ ಕೆಂಪು ಬಣ್ಣದ ಬೆಳ್ಳುಳ್ಳಿ ಚಟ್ನಿ. ನೀವು ಮನೆಯಲ್ಲಿ ತಯಾರಿಸಲು ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು: ಬೆಳ್ಳುಳ್ಳಿಯ ಎಸಳುಗಳು,ಇರುಳ್ಳಿ,ಒಣ ಮೆಣಸು, ಕರಿಬೇವು, ಅರಶಿನ, ಉದ್ದಿನ ಬೇಳೆ,ಇಂಗು,ಎಳ್ಳಿನ ಎಣ್ಣೆ, ರುಚಿಗೆ ಉಪ್ಪು.
ಒಂದು ಪ್ಯಾನ್ನಲ್ಲಿ ಎಣ್ಣೆ ಹಾಕಿ ಬೆಳ್ಳುಳ್ಳಿ ಮತ್ತು ಇರುಳ್ಳಿಯನ್ನುಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ. ನಂತರ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ.
ಹುರಿದಿಟ್ಟ ಬೆಳ್ಳುಳ್ಳಿ ಮತ್ತು ಇರುಳ್ಳಿಯ ಜೊತೆಗೆ ಮೆಣಸಿನ ಕಾಯಿ ಅರಶಿನ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಜೊತೆಗೆ ನೀರು ಮತ್ತು ಉಪ್ಪು ಸೇರಿಸಿ.
ಈಗಾಗಲೇ ರುಬ್ಬಿಕೊಂಡ ಚಟ್ನಿಯನ್ನು ಒಂದು ಪ್ಯಾನ್ನಲ್ಲಿ ಸ್ವಲ್ಪ ಹೊತ್ತು ಕುದಿಸಿ.
ಸ್ವಲ್ಪ ಎಣ್ಣೆ, ಇಂಗು, ಸಾಸಿವೆ, ಕರಿಬೇವು ಮತ್ತು ಉದ್ದಿನ ಬೇಳೆ ಹಾಕಿ ಒಗ್ಗರಣೆ ಮಾಡಿ. ಈ ಒಗ್ಗರಣೆಯನ್ನು ಚಟ್ನಿಗೆ ಹಾಕಿ.
ಈಗ ಬೆಳ್ಳುಳ್ಳಿಯ ಸುವಾಸನೆ ಭರಿತ ಚಟ್ನಿ ಸಿದ್ದವಾಗಿದೆ. ದೋಸೆ, ಇಡ್ಲಿಯೊಂದಿಗೆ ಸವಿಯಿರಿ.