ಬೇಸಿಗೆಯಲ್ಲಿ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಇದಕ್ಕೊಸ್ಕರ ತಜ್ಞರು ಈ ಹಸಿರು ತರಕಾರಿ, ಹಣ್ಣುಗಳನ್ನು ಸೇವಿಸಲು ಸೂಚಿಸುತ್ತಾರೆ

ಖ್ಯಾತ ಪೌಷ್ಟಿಕ ತಜ್ಞರು ಬೇಸಿಗೆಯಲ್ಲಿ ದೇಹದ ಸ್ಥಿರತೆಯನ್ನ ಕಾಯ್ದುಕೊಳ್ಳಲು ಸೂಕ್ತವಾದ ಆಹಾರ ಮಾಗದರ್ಶಿಯನ್ನ ಹಂಚಿಕೊಂಡಿದ್ದಾರೆ

ಟೊಮೆಟೋದಲ್ಲಿ ವಿಟಮಿನ್ ಸಿ ತುಂಬಿರುತ್ತದೆ. ಇದು ಒಟ್ಟಾರೆ ಆರೋಗ್ಯ ಮತ್ತು ಚರ್ಮಕ್ಕೆ ಸಹಕಾರಿಯಾಗಿದೆ

ಕಲ್ಲಂಗಡಿ ಹಣ್ಣಿನಲ್ಲಿ ನೀರು ಹೇರಳವಾಗಿದ್ದು, ಹೈಡ್ರೇಶನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನ ಸೂರ್ಯನ ಹಾನಿಯಿಂದ ರಕ್ಷಿಸಲು ಸಹಾಯಕ

ನೋಡಲು ಸೌತೆಕಾಯಿಯಂತೆ ಹೋಲುವ ಜುಕೀನಿಯಲ್ಲಿ ಅದರ ತೂಕದ 94 ಪ್ರತಿಶತ ನೀರಿನಿಂದ ಕೂಡಿದ್ದು, ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ

ಬೆರ್ರಿ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವುದರಿಂದ ಬೇಸಿಗೆಯಲ್ಲಿ ಚರ್ಮದ ಆರೋಗ್ಯಕ್ಕೆ ಸಹಾಯಕಾರಿ

ಪಾಲಕ್ , ಎಲೆಕೋಸು ಇಂತಹ ತರಕಾರಿಗಳಲ್ಲಿ ನೀರಿನಾಂಶ ಹೆಚ್ಚಿರುತ್ತದೆ, ಇವುಗಳನ್ನು ಹಾಗೆ ಸೇವಿಸಬಹುದು