ವಿಶ್ವದ ಅತಿಶ್ರೀಮಂತ ಇಲಾನ್ ಮಸ್ಕ್ ಅವರ ಕಂಪನಿಗಳು

By Vjayasarathy SN

ಇಲಾನ್ ಮಸ್ಕ್ ಅವರ ಮೊದಲ ಕಂಪನಿ ಝಿಪ್2. 1995ರಲ್ಲಿ ತಮ್ಮ ಸಹೋದರ ಕಿಂಬಲ್ ಹಾಗೂ ಗ್ರೆಗ್ ಕೂರಿ ಜೊತೆ ಸೇರಿ ಸ್ಥಾಪಿಸಿದರು. ಮ್ಯಾಪ್ ಇತ್ಯಾದಿ ಇರುವ ಇಂಟರ್ನೆಟ್ ಸಿಟಿ ಗೈಡ್ ಸೇವೆ ಒದಗಿಸುತ್ತಿದ್ದ ಕಂಪನಿ ಇದು.

Zip2

ಝಿಪ್2 ಮಾರಿದ ಬಳಿಕ ಇಲಾನ್ ಮಸ್ಕ್ 1999ರಲ್ಲಿ ಎಕ್ಸ್ ಡಾಟ್ ಕಾಮ್ ಎಂಬ ಆನ್​ಲೈನ್ ಹಣಕಾಸು ಸೇವೆಗಳ ಕಂಪನಿ ಸ್ಥಾಪಿಸಿದರು. ಕಾನ್​ಫೈನಿಟಿ ಎಂಬ ಆನ್​ಲೈನ್ ಬ್ಯಾಂಕ್ ಜೊತೆ ಇದು ವಿಲೀನಗೊಂಡಿತು. ಬಳಿಕ ಪೇಪಾಲ್ ಶುರುವಾಯಿತು.

X.com, PayPal

ಇಲಾನ್ ಮಸ್ಕ್ 2001ರಲ್ಲಿ ಸ್ಪೇಸ್​ಎಕ್ಸ್ ಕಂಪನಿ ಸ್ಥಾಪಿಸಿದರು. ಮಂಗಳ ಗ್ರಹದಲ್ಲಿ ಗಿಡ ಬೆಳೆಸುವ ಯೋಜನೆಯಲ್ಲಿ ಆಸಕ್ತಿ ಹೊಂದಿ ರಾಕೆಟ್​ಗಳನ್ನು ಖರೀದಿಸಲು ಹೋದಾಗ ದುಬಾರಿ ಬೆಲೆ ಇರುವುದು ಗೊತ್ತಾಯಿತು. ಆಗ ಕಡಿಮೆ ಬೆಲೆಗೆ ರಾಕೆಟ್ ತಯಾರಿಸಲು ತಮ್ಮದೇ ಸ್ಪೇಸ್​ಎಕ್ಸ್ ಕಂಪನಿ ಹುಟ್ಟುಹಾಕಿದರು.

SpaceX

2003ರಲ್ಲಿ ಮಾರ್ಟಿನ್ ಎಬರ್​ಹಾರ್ಡ್ ಮತ್ತು ಮಾರ್ಕ್ ಟಾರ್ಪೆನಿಂಗ್ ಸ್ಥಾಪಿಸಿದ ಕಂಪನಿ ಟೆಸ್ಲಾ. ಇದರಲ್ಲಿ ಇಲಾನ್ ಮಸ್ಕ್ ಹೂಡಿಕೆದಾರ ಮಾತ್ರವಾಗಿದ್ದರು. ಕಂಪನಿ ಹಣಕಾಸು ಬಿಕ್ಕಟ್ಟಿಗೆ ಸಿಲುಕಿದ ಬೆನ್ನಲ್ಲೇ ಕಾನೂನು ವ್ಯಾಜ್ಯ ಶುರುವಾಗಿ 2009ರಲ್ಲಿ ಮಸ್ಕ್ ಅವರಿಗೆ ಟೆಸ್ಲಾದ ಸಹ-ಸಂಸ್ಥಾಪಕ ಸ್ಥಾನ ಸಿಕ್ಕಿತು.

Tesla

2006ರಲ್ಲಿ ಸ್ಥಾಪನೆಯಾದ ಸೋಲಾರ್​ಸಿಟಿ ಎಂಬ ಸೌರಶಕ್ತಿ ಉತ್ಪಾದಕ ವ್ಯವಸ್ಥೆಯ ಕಂಪನಿಯನ್ನು 2016ರಲ್ಲಿ ಟೆಸ್ಲಾ ಖರೀದಿಸಿತು. ಬಳಿಕ ಅದು ಟೆಸ್ಲಾ ಎನರ್ಜಿ ಎಂದು ಬದಲಾಯಿತು.

Tesla Energy

ಟೆಸ್ಲಾ ಎನರ್ಜಿ ಸ್ಥಾಪನೆಯಾದ ವರ್ಷ 2016ರಲ್ಲೇ ಇಲಾನ್ ಮಸ್ಕ್ ಅವರು ನ್ಯೂರಾಲಿಂಕ್ ಎಂಬ ಕಂಪನಿ ಆರಂಭಿಸಿದರು. ಇದು ಮಾನವನ ಮಿದುಳಿಗೆ ಎಐ ಸಾಧನ ಅಳವಡಿಸುವ ಉದ್ದೇಶ ಇರುವ ಕಂಪನಿ. ಮಿದುಳು ದೌರ್ಬಲ್ಯ ಇರುವ ರೋಗಗಳಿಗೆ ಈ ತಂತ್ರಜ್ಞಾನದ ಮೂಲಕ ಚಿಕಿತ್ಸೆ ಸಾಧ್ಯ ಎನ್ನಲಾಗಿದೆ.

Neuralink

ಇಲಾನ್ ಮಸ್ಕ್ 2017ರಲ್ಲಿ ದಿ ಬೋರಿಂಕ್ ಕಂಪನಿ ಎಂಬ ಸಂಸ್ಥೆ ಹುಟ್ಟುಹಾಕಿದರು. ಇದು ಸುರಂಗ ರಸ್ತೆ ಕೊರೆಯುವ ಕಂಪನಿ.

The Boring Company

2017ರಲ್ಲಿ ಟ್ವಿಟ್ಟರ್ ಖರೀದಿಸುವ ಆಸಕ್ತಿ ತೋರಿದ್ದ ಇಲಾನ್ ಮಸ್ಕ್ ಹಂತ ಹಂತವಾಗಿ ಟ್ವಿಟ್ಟರ್ ಷೇರುಗಳನ್ನು ಖರೀದಿಸತೊಡಗಿದ್ದರು. ಅಂತಿಮವಾಗಿ 2022ರಲ್ಲಿ ಅವರು ಟ್ವಿಟ್ಟರ್ ಖರೀದಿಸಿದರು. 2022ರ ಮಾರ್ಚ್​ನಲ್ಲಿ ಅವರು ಸಿಇಒ ಸ್ಥಾನ ಬಿಟ್ಟುಕೊಟ್ಟರು.

Twitter

ಚ್ಯಾಟ್​ಜಿಪಿಟಿ ತಯಾರಕ ಓಪನ್​ಎಐ ಸಂಸ್ಥೆಯ ಸಹ-ಸಂಸ್ಥಾಪಕರಲ್ಲಿ ಇಲಾನ್ ಮಸ್ಕ್ ಅವರೂ ಒಬ್ಬರು. ಬಳಿಕ ಓಪನ್​ಎಐನಿಂದ ದೂರವಾದ ಮಸ್ಕ್ 2023ರ ಜುಲೈ 12ರಂದು ತಮ್ಮದೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿ ಎಸ್​ಎಐ ಅನ್ನು ಸ್ಥಾಪಿಸಿದರು.

xAI

ಇಲಾನ್ ಮಸ್ಕ್ ವ್ಯವಹಾರಗಳು ಇಷ್ಟಕ್ಕೇ ಇಲ್ಲ. ಮಂಗಳ ಗ್ರಹದಲ್ಲಿ ಮಾನವರ ವಸಾಹತು, ಹೈಪರ್​ಲೂಪ್ ಎಂಬ ವಿನೂತನ ಸಾರಿಗೆ ವ್ಯವಸ್ಥೆ ಇತ್ಯಾದಿ ಹಲವು ಪರಿಕಲ್ಪನೆಗಳಿಗೆ ಮಸ್ಕ್ ಹೆಸರಾಗಿದ್ದಾರೆ.