ತೆರಿಗೆ ಉಳಿತಾಯಕ್ಕೆ ಪೂರಕವಾಗಿರುವ ಮ್ಯೂಚುವಲ್ ಫಂಡ್​ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ಸ್ (ELSS) ಮ್ಯೂಚುವಲ್ ಫಂಡ್​ಗಳು ಹೂಡಿಕೆದಾರರಿಗೆ ತೆರಿಗೆ ಉಳಿತಾಯಕ್ಕೆ ನೆರವಾಗುತ್ತವೆ.

ಹೂಡಿಕೆ ತಜ್ಞರು ನೀಡಿರುವ ಸಲಹೆ ಆಧಾರಿತ 5 ಟ್ಯಾಕ್ಸ್ ಸೇವಿಂಗ್ ಮ್ಯೂಚುವಲ್ ಫಂಡ್​ಗಳ ಮಾಹಿತಿ ಇಲ್ಲಿದೆ.

ಕ್ವಾಂಟ್ ಟ್ಯಾಕ್ಸ್ ಪ್ಲಾನ್ ಉತ್ತಮ ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಆಗಿದ್ದು, ವಾರ್ಷಿಕ ಶೇ 14.38ರ ರಿಟರ್ನ್ಸ್ ನೀಡುತ್ತಿದೆ.

ಎಚ್​ಡಿಎಫ್​ಸಿ ಟ್ಯಾಕ್ಸ್ ಸೇವರ್ ಫಂಡ್ ಒಂದು ವರ್ಷಕ್ಕೆ ಶೇ 13.38ರ ರಿಟರ್ನ್ಸ್ ಒದಗಿಸುತ್ತಿದೆ.

ಒಂದು ವರ್ಷಕ್ಕೆ ಶೇ 10.80 ಗಳಿಕೆಯೊಂದಿಗೆ ಎಸ್​ಬಿಐ ಟ್ಯಾಕ್ಸ್ ಅಡ್ವಾಂಟೇಜ್ ಫಂಡ್ ಕಾರ್ಯನಿರ್ವಹಿಸುತ್ತಿದೆ.

ಕೋಟಕ್ ಟ್ಯಾಕ್ಸ್ ಸೇವರ್ ಫಂಡ್; ವಾರ್ಷಿಕ ಶೇ 9.84ರ ಗಳಿಕೆ ದಾಖಲಿಸಿದೆ.

ನಿಪ್ಪಾನ್ ಇಂಡಿಯಾ ಟ್ಯಾಕ್ಸ್ ಸೇವರ್ ಫಂಡ್; ವಾರ್ಷಿಕ ಶೇ 9.37ರ ಗಳಿಕೆ ದಾಖಲಿಸುತ್ತಿದೆ.