ಅಲ್ಲು ಅರ್ಜುನ್ ಕೈಗೆ ಧರಿಸಿರುವ ಗಡಿಯಾರದ ಬೆಲೆ ಕೆಲವು ಲಕ್ಷ ರೂಪಾಯಿಗಳು

28 May 2024

Author : Manjunatha

ಅಲ್ಲು ಅರ್ಜುನ್, ಸ್ಟೈಲಿಷ್ ಸ್ಟಾರ್ ಎಂದೇ ಟಾಲಿವುಡ್​ನಲ್ಲಿ ಜನಪ್ರಿಯರು. ಯಾವಾಗಲೂ ಸಖತ್ ಸ್ಟೈಲ್ ಆಗಿಯೇ ಕಾಣಿಸಿಕೊಳ್ಳುತ್ತಾರೆ.

ಸ್ಟೈಲಿಷ್ ಸ್ಟಾರ್ ಅಲ್ಲು

ಅಲ್ಲು ಅರ್ಜುನ್​ ತಮ್ಮ ಲುಕ್ಸ್​ ಮೇಲೆ, ಧರಿಸುವ ಬಟ್ಟೆಗಳ ಮೇಲೆ, ಧರಿಸುವ ಆಕ್ಸಸರಿಗಳ ಮೇಲೆ ಅತೀವ ಕಾಳಜಿವಹಿಸುತ್ತಾರೆ.

ಫ್ಯಾಷನ್ ಸೆನ್ಸ್ ಇರುವ ನಟ

ಹಲವು ಬ್ರ್ಯಾಂಡ್​ನ ಬಟ್ಟೆಗಳು, ಶೂ, ವಾಚುಗಳು ಅಲ್ಲು ಅರ್ಜುನ್ ಸಂಗ್ರಹದಲ್ಲಿವೆ. ಅದರಲ್ಲಿಯೂ ವಾಚ್ ಪ್ರಿಯರಾದ ಅಲ್ಲು ಬಳಿ ಹಲವು ಬ್ರ್ಯಾಂಡ್​ನ ವಾಚುಗಳಿವೆ.

ಹಲವು ಬಗೆ ವಾಚುಗಳಿವೆ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಲ್ಲು ಅರ್ಜುನ್, ಧರಿಸಿದ್ದ ವಾಚು ಸಖತ್ ಗಮನ ಸೆಳೆಯಿತು.

ಗಮನ ಸೆಳೆದ ಅಲ್ಲು ವಾಚು

ಅಲ್ಲು ಅರ್ಜುನ್ ಧರಿಸಿರುವ ವಾಚಿನ ಬೆಲೆ ಬರೋಬ್ಬರಿ 3.97 ಲಕ್ಷ ರೂಪಾಯಿಗಳು. ತೆರಿಗೆ, ಸಾಗಣೆ ಎಲ್ಲ ಸೇರಿದರೆ 4.50 ಲಕ್ಷ ಆಗಬಹುದೇನೋ.

ವಾಚಿನ ಬೆಲೆ ಎಷ್ಟು ಲಕ್ಷ?

ಅಲ್ಲು ಅರ್ಜುನ್ ಈ ಚಿತ್ರದಲ್ಲಿ ಧರಿಸಿರುವುದು ಪನೆರಾಯ್ ಲುಮಿನರ್ ಮರೀನಾ ವಾಚ್. ಇದು ಅತ್ಯಂತ ದುಬಾರಿ ಬ್ರ್ಯಾಂಡ್​ಗಳಲ್ಲಿ ಒಂದು.

ಪನೆರಾಯ್ ಲುಮಿನರ್ 

ಅಲ್ಲು ಅರ್ಜುನ್ ಫ್ಯಾಷನ್ ಬಗ್ಗೆ ವಿಶೇಷ ಕಾಳಜಿ ವಹಿಸುವವರಾಗಿದ್ದು, ಖಾಸಗಿ ಪ್ಯಾಷನ್ ಡಿಸೈನರ್, ಸ್ಟೈಲಿಸ್ಟ್​ಗಳನ್ನು ಹೊಂದಿದ್ದಾರೆ.

ಸ್ಟೈಲಿಷ್ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಪ್ರಸ್ತುತ ‘ಪುಷ್ಪ 2’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಆಗಸ್ಟ್ 15 ಕ್ಕೆ ತೆರೆಗೆ ಬರಲಿದೆ.

‘ಪುಷ್ಪ 2’ ಸಿನಿಮಾಶೂಟಿಂಗ್​

‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ ತ್ರಿವಿಕ್ರಮ್ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್,ತ್ರಿವಿಕ್ರಮ್

‘ಕೆಜಿಎಫ್’ ಸಿನಿಮಾದಲ್ಲಿ ರಾಖಿಭಾಯ್ ಯಶ್ ರ ಬಾಲ್ಯದ ಪಾತ್ರದಲ್ಲಿ ನಟಿಸಿರುವ ಹುಡುಗ ಈಗ ನೋಡಿ ಹೇಗಾಗಿದ್ದಾನೆ