ಬಾಲಿವುಡ್ ಟಾಪ್ ನಟಿ ಆಲಿಯಾ ಭಟ್ ಕೈಯಲ್ಲಿರುವ ಈ ಪುಟ್ಟ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿಯೆಂದು ನಿಮಗೆ ಗೊತ್ತೆ?

11 Feb 2024

Author : Manjunatha

ಆಲಿಯಾ ಭಟ್, ಬಾಲಿವುಡ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರು. ಅವರ ಸಿನಿಮಾಗಳು ಸೋಲುವುದು ವಿರಳ.

ಬಾಲಿವುಡ್ ಟಾಪ್ ನಟಿ

ಸಿನಿಮಾವೊಂದಕ್ಕೆ 20-25 ಕೋಟಿ ರೂಪಾಯಿಯ ವರೆಗೆ ಸಂಭಾವನೆ ಪಡೆವ ಆಲಿಯಾ ಭಟ್, ಸಂಭಾವನೆಗೆ ತಕ್ಕಂತೆ ಐಶಾರಾಮಿ ಜೀವನ ಶೈಲಿ ಹೊಂದಿದ್ದಾರೆ.

ಆಲಿಯಾ ಸಂಭಾವನೆ 

ಈ ಚಿತ್ರಗಳಲ್ಲಿ ಆಲಿಯಾ ಭಟ್ ಒಂದು ಪುಟ್ಟ ಬ್ಯಾಗ್ ಹಿಡಿದಿದ್ದಾರೆ. ಫ್ಯಾಷನ್ ಲೋಕದ ಆಳ-ಅಗಲ ಗೊತ್ತಿಲ್ಲದವರಿಗೆ 2000-3000 ಬೆಲೆಯ ಬ್ಯಾಗ್ ಇದಾಗಿರಬಹುದು ಎನ್ನಿಸಬಹುದು.

ಯಾವುದು ಆ ಬ್ಯಾಗ್?

ಆದರೆ ಆಲಿಯಾ ಭಟ್ ಕೈಯಲ್ಲಿ ಹಿಡಿದಿರುವ ಆ ಪುಟ್ಟ, ಬ್ರೌನ್ ಬಣ್ಣದ ಬ್ಯಾಗಿನ ಬೆಲೆ ಬರೋಬ್ಬರಿ 4.93 ಲಕ್ಷ ರೂಪಾಯಿಗಳು. 5 ಲಕ್ಷಕ್ಕೆ ಕೇವಲ ಏಳು ಸಾವಿರ ರೂಪಾಯಿ ಕಡಿಮೆ.

ಬ್ಯಾಗಿನ ಬೆಲೆ ಎಷ್ಟು?

ಆಲಿಯಾ ಭಟ್ ಹಿಡಿದಿರುವ ಬ್ಯಾಗಿನ ಬೆಲೆಗೆ ಮಾರುತಿ ಸಂಸ್ಥೆಯ ಎಂಟ್ರಿ ಲೆವೆಲ್ ಕಾರೊಂದನ್ನು ಆರಾಮವಾಗಿ ಖರೀದಿಸಬಹುದು.

ಕಾರು ಖರೀದಿಸಬಹುದು

ಆಲಿಯಾ ಭಟ್ ಹಿಡಿದಿರುವುದು ವಿಶ್ವದ ಜನಪ್ರಿಯ ಬ್ರ್ಯಾಂಡ್​ಗಳಲ್ಲಿ ಒಂದಾದ ಗುಚ್ಚಿ ಬ್ರ್ಯಾಂಡ್​ನ ಬ್ಯಾಂಬೂ 1947 ಬ್ರೌನ್ ಬ್ಯಾಗ್. ಇದರ ಬೆಲೆ ಸಾವಿರಗಳಲ್ಲಿ ಅಲ್ಲ ಲಕ್ಷಗಳಲ್ಲಿಯೇ ಇದೆ.

ಜನಪ್ರಿಯ ಬ್ರ್ಯಾಂಡ್

ಆಲಿಯಾ ಹಿಡಿದಿರುವ ಈ ಬ್ಯಾಗ್ ತಯಾರಾಗಿರುವುದು ಇಟಲಿಯಲ್ಲಿ, ಕೈಯಿಂದಲೇ ಮಾಡಿದ ಬಿದಿರಿನ ಹ್ಯಾಂಡಲ್, ಚಿನ್ನದ ಸಣ್ಣ ಲೋಗೊ, ಲೆದರ್​ನ ಬಳಕೆ, ಕೈಯಿಂದ ಮಾಡಿದ ಸ್ಟಿಚ್​ಗಳನ್ನು ಬ್ಯಾಗು ಒಳಗೊಂಡಿದೆ.

ಇಟಲಿಯಲ್ಲಿ ತಯಾರು

ದುಬಾರಿ ಬ್ಯಾಗ್ ಕೈಯಲ್ಲಿ ಹಿಡಿದಿರುವ ಆಲಿಯಾ ಭಟ್ ಡೆನಿಮ್​ನ ಎರಡು ಲಕ್ಷ ಬೆಲೆಯ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಸರಳವಾದುದೇನೋ ಎಂಬಂತೆ ಕಾಣುವ ಶರ್ಟ್ ಧರಿಸಿದ್ದಾರೆ.

ಜೀನ್ಸ್ ಪ್ಯಾಂಟ್ ಬೆಲೆ

ಆಲಿಯಾ ಭಟ್ ಬಾಲಿವುಡ್​ನ ಟಾಪ್ ನಟಿ, ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ ಅದರಂತೆ ಬ್ಯಾಗ್​ಗೆ ಲಕ್ಷಗಳಲ್ಲಿ ಖರ್ಚು ಮಾಡುವುದು ಅವರ ಪಾಲಿಗೆ ದೊಡ್ಡದೇನಲ್ಲ ಬಿಡಿ

ದೊಡ್ಡದೇನಲ್ಲ ಬಿಡಿ

ರಾಮ್ ಚರಣ್ ಜೊತೆಗಿನ ಸಿನಿಮಾಕ್ಕೆ ಜಾನ್ಹವಿ ಕಪೂರ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ?