ನಟಿ ಚೈತ್ರಾ ಆಚಾರ್​ಗೆ ಒಂದರ ಹಿಂದೊಂದು ಒಳ್ಳೆಯ ಸಿನಿಮಾಗಳು ಸಿಗುತ್ತಿವೆ, ಇದರ ಗುಟ್ಟೇನು, ಈಗ ಕೈಯಲ್ಲಿ ಯಾವ ಸಿನಿಮಾಗಳು ಇವೆ?

12 NOV 2023

ಚೈತ್ರಾ ಆಚಾರ್, ನಟನೆ ಆರಂಭಿಸಿದ ಸಮಯದಿಂದಲೂ ಉತ್ತಮ ಕತೆಯುಳ್ಳ ಸಿನಿಮಾಗಳಲ್ಲಿಯೇ ನಟಿಸುತ್ತಾ ಬಂದಿದ್ದಾರೆ. ಇದು ಅದೃಷ್ಟವೋ? ಅವರ ಆಯ್ಕೆಯೋ?

ಉತ್ತಮ ಕತೆ

ಚೈತ್ರಾ ಹೇಳುವ ಪ್ರಕಾರ, ಉದ್ದೇಶಪೂರ್ವಕವಾಗಿ ಅಳೆದು ತೂಗಿಯೇ ಅವರು ಕತೆ, ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ.

ಅಳೆದು ತೂಗಿ ಆಯ್ಕೆ

ಅರಸಿ ಬಂದ ಎಲ್ಲ ಅವಕಾಶಗಳನ್ನೂ ಒಪ್ಪಿಕೊಳ್ಳುವುದಿಲ್ಲ, ನಟನೆಗೆ ಅವಕಾಶ, ಕತೆಯಲ್ಲಿ ಶಕ್ತಿ ಇದ್ದರಷ್ಟೆ ಆಯ್ಕೆ ಮಾಡುತ್ತೇನೆ ಎಂದಿದ್ದಾರೆ.

ಎಲ್ಲ ಒಪ್ಪಿಕೊಳ್ಳಲಲ್ಲ

ಚೈತ್ರಾ ಆಚಾರ್ ಮೊದಲು ನಟಿಸಿದ್ದು 'ಮಹಿರಾ' ಸಿನಿಮಾದಲ್ಲಿ ತಮ್ಮ ನಿಜ ವಯಸ್ಸಿಗಿಂತಲೂ ಕಡಿಮೆ ವಯಸ್ಸಿನ ಪಾತ್ರದಲ್ಲಿ ಚೈತ್ರಾ ನಟಿಸಿದ್ದರು.

'ಮಹಿರಾ' ಸಿನಿಮಾ

ಆ ನಂತರ ಚೈತ್ರಾ ನಟಿಸಿದ 'ಗಿಲ್ಕಿ' ಹಾಗೂ 'ತಲೆದಂಡ' ಸಿನಿಮಾಗಳಿಗೆ ಹಲವು ಪ್ರಶಸ್ತಿಗಳು ಬಂದವು. ತಲೆದಂಡಕ್ಕೆ ರಾಷ್ಟ್ರಪ್ರಶಸ್ತಿ ಧಕ್ಕಿತು. ‘ಟೋಬಿ’ ಸಿನಿಮಾದಲ್ಲಿಯೂ ಚೈತ್ರಾ ನಟನೆ ಅದ್ಭುತವಾಗಿತ್ತು.

ರಾಷ್ಟ್ರಪ್ರಶಸ್ತಿ

ಚೈತ್ರಾ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ಚೈತ್ರಾ ನಾಯಕಿ.

ಸಪ್ತ ಸಾಗರದಾಚೆ 

ಚೈತ್ರಾ ಪ್ರಸ್ತುತ 'ಸ್ಟ್ರಾಬೆರಿ', ‘ಬ್ಲಿಂಕ್’, ‘ಹ್ಯಾಪಿ ಬರ್ತ್​ ಡೇ ಟು ಮೀ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ‘ಸ್ಟ್ರಾಬೆರಿ’ ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ.

ಕೈಲಿರುವ ಸಿನಿಮಾಗಳು

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಗ್ಗೆ ಚೈತ್ರಾಗೆ ಭಾರಿ ನಿರೀಕ್ಷೆ ಇದ್ದು, ಈ ಸಿನಿಮಾ ಚೈತ್ರಾಗೆ ಇನ್ನಷ್ಟು ಅವಕಾಶಗಳ ತಂದೊಗೆಯುವ ಸಾಧ್ಯತೆ ಇದೆ.

ಭಾರಿ ನಿರೀಕ್ಷೆ

ಸಖತ್ ಬೋಲ್ಡ್ ಆದ ನಟಿ ತಮನ್ನಾ, ಇಲ್ಲಿ ನೋಡಿ ಚಿತ್ರಗಳು