‘ತಾರೆ ಜಮೀನ್ ಪರ್’ ಸಿನಿಮಾದ ಈ ಬಾಲಕ ಈಗ ಹೇಗಿದ್ದಾನೆ ಗೊತ್ತ?

15 Jan 2024

Author : Manjunatha

ಆಮಿರ್ ಖಾನ್ ನಟಿಸಿ, ನಿರ್ದೇಶನ ಮಾಡಿದ್ದ ‘ತಾರೆ ಜಮೀನ್ ಪರ್’ ಸಿನಿಮಾ 2007 ರಲ್ಲಿ ಬಿಡುಗಡೆ ಆಗಿತ್ತು.

‘ತಾರೆ ಜಮೀನ್ ಪರ್’

ಆ ಸಿನಿಮಾದಲ್ಲಿ ಇಶಾನ್ ಅವಸ್ತಿಯ ಪಾತ್ರ ಮಾಡಿದ್ದ ಬಾಲನಟನ ನಟನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು.

ಇಶಾನ್ ಅವಸ್ತಿಯ ಪಾತ್ರ

ಮಕ್ಕಳ ಮಾನಸಿಕ ಸಮಸ್ಯೆ ಬಗೆಗೆ ಚರ್ಚಿಸುವ ಸಿನಿಮಾ ಅದಾಗಿತ್ತು, ಇಶಾನ್ ಪಾತ್ರದಲ್ಲಿ ದರ್ಶಿಲ್ ಸಫಾರಿ ನಟಿಸಿದ್ದರು. ಆಗ ಅವರಿಗೆ ಕೇವಲ 10 ವರ್ಷ ವಯಸ್ಸು.

10 ವರ್ಷ ವಯಸ್ಸು

ದರ್ಶಿಲ್ ಸಫಾರಿ ಈಗ ಯುವಕ, 97ರಲ್ಲಿ ಜನಿಸಿದ ದರ್ಶಿಲ್​ ಸಫಾರಿಗೆ ಈಗ 26 ವರ್ಷ ವಯಸ್ಸು.

ಈಗ ವಯಸ್ಸೆಷ್ಟು?

ಬಾಲನಟನಾಗಿ ಸಖತ್ ಮಿಂಚಿದ ದರ್ಶಿಲ್, ಈಗಲೂ ನಟನೆ ಮುಂದುವರೆಸಿದ್ದು, ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.

ಬಾಲನಟ ದರ್ಶಿಲ್

ಕಛ್ ಎಕ್ಸ್​ಪ್ರೆಸ್’ ಹೆಸರಿನ ಗುಜರಾತಿ ಸಿನಿಮಾದಲ್ಲಿ ದರ್ಶಿಲ್ ನಾಯಕರಾಗಿ ನಟಿಸಿದ್ದರು. ಅದಾದ ಬಳಿಕ ‘ಹಕ್ಕಾ ಬಕ್ಕಾ’ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ.

ಸಿನಿಮಾ ನಟ ದರ್ಶಿಲ್

ಇತ್ತೀಚೆಗಷ್ಟೆ ನಡೆದ ಆಮಿರ್ ಖಾನ್​ರ ಮಗಳು ಇರಾ ಖಾನ್ ಮದುವೆಯಲ್ಲಿ ದರ್ಶಿಲ್ ಭಾಗಿಯಾಗಿದ್ದರು.

ಇರಾ ಖಾನ್ ಮದುವೆ

ಇನ್​ಸ್ಟಾಗ್ರಾಂನಲ್ಲೂ ಸಕ್ರಿಯವಾಗಿರುವ ದರ್ಶಿಲ್ ಸಫಾರಿ, ಮಾಡೆಲಿಂಗ್ ಜೊತೆಗೆ ನಟನೆ ಮುಂದುವರೆಸಿದ್ದಾರೆ. ಒಳ್ಳೆಯ ಅವಕಾಶಗಳಿಗೆ ಎದುರು ನೋಡುತ್ತಿದ್ದಾರೆ.

ದರ್ಶಿಲ್ ಸಫಾರಿ

64ರ ವಯಸ್ಸಿನಲ್ಲೂ ಫಿಟ್ ಆಗಿ, ಯಂಗ್ ಆಗಿ ಕಾಣುತ್ತಾರೆ ನಾಗಾರ್ಜುನ, ಇದರ ಗುಟ್ಟನ್ನು ಅವರೇ ರಟ್ಟು ಮಾಡಿದ್ದಾರೆ