ರಾಮ್ ಚರಣ್ ಜೊತೆ ಸಿನಿಮಾಕ್ಕೆ ಜಾನ್ಹವಿ ಕಪೂರ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ?

11 Feb 2024

Author : Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ನಟಿ ಆದರೆ ಈಗ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.

ಬಲು ಬೇಡಿಕೆಯ ನಟಿ

ಜೂ ಎನ್​ಟಿಆರ್ ನಟಿಸುತ್ತಿರುವ ‘ದೇವರ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಎರಡು ಶೇಡ್​ನಲ್ಲಿ ಇವರ ಪಾತ್ರ ಇರಲಿದೆ.

ಜಾನ್ಹವಿ ಕಪೂರ್ ನಾಯಕಿ

‘ದೇವರ’ ಸಿನಿಮಾ ಬಿಡುಗಡೆ ಆಗುವುದಕ್ಕೆ ಮುನ್ನವೇ ತೆಲುಗಿನಿಂದ ಮತ್ತೊಂದು ಹಾಗೂ ತಮಿಳಿನಿಂದ ಒಂದು ಸಿನಿಮಾಗಳ ಅವಕಾಶ ಬಾಚಿಕೊಂಡಿದ್ದಾರೆ.

ಸಿನಿಮಾ ಆಫರ್​ಗಳು

ಆದರೆ ತಮ್ಮ ಈ ಹೊಸ ತೆಲುಗು ಹಾಗೂ ತಮಿಳು ಸಿನಿಮಾಗಳಿಗೆ ಜಾನ್ಹವಿ ಕಪೂರ್ ಭಾರಿ ದೊಡ್ಡ ಸಂಭಾವನೆಯನ್ನು ತೆಗೆದುಕೊಳ್ಳಲಿದ್ದಾರೆ. ಬಾಲಿವುಡ್​ ಸಿನಿಮಾಕ್ಕಿಂತಲೂ ಹೆಚ್ಚಿನ ಸಂಭಾವನೆ.

ದೊಡ್ಡ ಸಂಭಾವನೆ

ರಾಮ್ ಚರಣ್ ತೇಜ ಜೊತೆ ನಟಿಸಲು ಜಾನ್ಹವಿ ಕಪೂರ್ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

 10 ಕೋಟಿ ರೂಪಾಯಿ

ದಕ್ಷಿಣ ಭಾರತದಲ್ಲಿ ಯಾವುದೇ ನಾಯಕಿ ಈವರೆಗೆ ಇಷ್ಟು ದೊಡ್ಡ ಮೊತ್ತವನ್ನು ಸಿನಿಮಾ ಸಂಭಾವನೆಯಾಗಿ ಪಡೆದಿಲ್ಲ. ಆದರೆ ಜಾನ್ಹವಿ ಕಪೂರ್ ಭಾರಿ ಮೊತ್ತದ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ.

ಭಾರಿ ಮೊತ್ತದ ಸಂಭಾವನೆ

ಜೂ ಎನ್​ಟಿಆರ್ ಜೊತೆ ನಟಿಸುತ್ತಿರುವ ‘ದೇವರ’ ಸಿನಿಮಾಕ್ಕೆ 6 ಕೋಟಿ ರೂಪಾಯಿ ಸಂಭಾವನೆಯನ್ನು ಜಾನ್ಹವಿ ಕಪೂರ್ ಪಡೆಯುತ್ತಿದ್ದಾರಂತೆ. ಈಗ ಬೇಡಿಕೆ ಹೆಚ್ಚಾದ ಬೆನ್ನಲ್ಲೆ ಸಂಭಾವನೆ ಏರಿಸಿಕೊಂಡಿದ್ದಾರೆ.

6 ಕೋಟಿ ರೂಪಾಯಿ

ರಾಮ್ ಚರಣ್ ಜೊತೆಗಿನ ಸಿನಿಮಾದ ಬಳಿಕ ತಮಿಳಿನಲ್ಲಿ ಸೂರ್ಯ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಆ ಸಿನಿಮಾಕ್ಕೂ 10 ಕೋಟಿ ಸಂಭಾವನೆ ಪಡೆಯಲಿದ್ದಾರೆ.

ಸೂರ್ಯ ಜೊತೆ ಸಿನಿಮಾ

ಅದಾದ ಬಳಿಕ ಬಾಲಿವುಡ್​ನಲ್ಲಿ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಜಾನ್ಹವಿ ನಟಿಸಲಿದ್ದಾರೆ. ವರುಣ್ ಧವನ್ ಜೊತೆಗೆ ಒಂದು ಕಾಮಿಡಿ ಸಿನಿಮಾದಲ್ಲಿ ಜಾನ್ಹವಿ ನಟಿಸಲಿದ್ದಾರೆ.

ವರುಣ್ ಧವನ್ ಜೊತೆ

ರಾಮಾಯಣ ಸಿನಿಮಾದಲ್ಲಿ ಶೂರ್ಪಣಕಿ ಪಾತ್ರದಲ್ಲಿ ನಟಿಸ್ತಾರಾ ರಕುಲ್ ಪ್ರೀತ್ ಸಿಂಗ್