ಪರಭಾಷೆಯಲ್ಲಿ ಮಿಂಚುತ್ತಿರುವ ಕನ್ನಡತಿ ಜ್ಯೋತಿ ರೈ ಅಲಿಯಾಸ್ ಜ್ಯೋತಿ ಪೂರ್ವ ಸಖತ್ ಬೋಲ್ಡ್ ಫೊಟೊ ಹಂಚಿಕೊಂಡಿದ್ದಾರೆ.

12 Mar 2024

Author : Manjunatha

ಮಡಿಕೇರಿ ಮೂಲದ ಜ್ಯೋತಿ ರೈ ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಈಗ ತೆಲುಗಿನ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ನಟಿ ಜ್ಯೋತಿ ರೈ 

ಧಾರಾವಾಹಿಗಳಲ್ಲಿ ಪಕ್ಕಾ ಗೃಹಿಣಿಯಾಗಿ ಕಾಣಿಸಿಕೊಳ್ಳುವ ಜ್ಯೋತಿ ರೈ, ಇನ್​ಸ್ಟಾಗ್ರಾಂನಲ್ಲಿ ಸಖತ್ ಬೋಲ್ಡ್ ಫೋಟೊ ಹಂಚಿಕೊಳ್ಳುತ್ತಾರೆ.

ಪರದೆಯಲ್ಲಿ ಪಕ್ಕಾ ಗೃಹಿಣಿ

ಜ್ಯೋತಿ ರೈ ಗ್ಲಾಮರಸ್ ಆದ ಉಡುಗೆ ಧರಿಸಿ ಫೋಟೊಶೂಟ್ ಮಾಡಿಸಿಕೊಂಡು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಗ್ಲಾಮರಸ್ ಉಡುಗೆ

ಇದೀಗ ‘ಸೂಪರ್ ವುಮನ್’ ಕ್ಯಾಪ್ಷನ್ ಅಡಿಯಲ್ಲಿ ಗ್ಲಾಮರಸ್ ಆಗಿರುವ ಚಿತ್ರವೊಂದನ್ನು ಜ್ಯೋತಿ ಹಂಚಿಕೊಂಡಿದ್ದಾರೆ. ಆದರೆ ಅದು ಎಐ ಜನರೇಟೆಡ್ ಫೋಟೊ.

‘ಸೂಪರ್ ವುಮನ್’

'ಗೆಜ್ಜೆಪೂಜೆ', ‘ಜೋಗುಳ’ 'ಅನುರಾಗ ಸಂಗಮ', 'ಕನ್ಯಾದಾನ', 'ಲವಲವಿಕೆ', 'ಪ್ರೇರಣಾ', 'ಕಿನ್ನರಿ', 'ಮೂರುಗಂಟು', 'ಕಸ್ತೂರಿ ನಿವಾಸ' ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕನ್ನಡದ ಧಾರಾವಾಹಿ

ತೆಲುಗಿನಲ್ಲಿ ‘ಗುಪ್ಪೆಟಂತ ಮನಸ್ಸು’ ಸೇರಿದಂತೆ ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲವು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ತೆಲುಗು ಧಾರಾವಾಹಿ

38 ವರ್ಷ ವಯಸ್ಸಿನ ಜ್ಯೋತಿ ರೈ, ಈಗಲೂ ಹಾಟ್ ನಟಿಯಾಗಿದ್ದು, ಇನ್​ಸ್ಟಾಗ್ರಾಂನಲ್ಲಿ ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಈಗಲೂ ಹಾಟ್ ನಟಿ

ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ಜ್ಯೋತಿ ರೈ ನಟಿಸಿದ್ದಾರೆ. ‘ದಿಯಾ’, ‘ಸಪ್ಲೈಯರ್ ಶಂಕರ’, ‘ಎ ಮಾಸ್ಟರ್​ಪೀಸ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾಗಳಲ್ಲಿ ನಟನೆ

‘ಬ್ಲಾಕ್ ಬರ್ಡ್’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ಜ್ಯೂತಿ ರೈ ನಟಿಸುತ್ತಿದ್ದಾರೆ. ತಮ್ಮ ಹೊಸ ಸಿನಿಮಾಗಳ ಪೋಸ್ಟರ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಜ್ಯೂತಿ ರೈ ನಟನೆ

ಮತ್ತೆ ಡೀಪ್ ಫೇಕ್ ವಿಡಿಯೋಗೆ ರಶ್ಮಿಕಾ ಮಂದಣ್ಣ ಚಿತ್ರ ಬಳಕೆ