ವಯಸ್ಸಿಗೂ ಗ್ಲಾಮರ್​ಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ ಕರೀನಾ ಕಪೂರ್: ಚಿತ್ರಗಳ ನೋಡಿ

01 Apr 2025

By  Manjunatha

ನಟಿ ಕರೀನಾ ಕಪೂರ್ ಒಂದು ಕಾಲದ ಬಾಲಿವಡ್​ನ ನಂಬರ್ 1 ನಟಿ. ಅವರು ಜೊತೆಗೆ ನಟಿಸದ ಸ್ಟಾರ್​ಗಗಳೇ ಇಲ್ಲ.

    ನಟಿ ಕರೀನಾ ಕಪೂರ್

ಮದುವೆಯಾದ ಬಳಿಕವೂ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಕರೀನಾ, ಮಕ್ಕಳಾದ ಮೇಲೆ ಸಹಜವಾಗಿಯೇ ಅವಕಾಶಗಳು ಕಡಿಮೆ ಆದವು.

    ಸಿನಿಮಾಗಳಲ್ಲಿ ಬ್ಯುಸಿ

ಈಗ ಕರೀನಾ ಕಪೂರ್​ಗೆ 44 ವರ್ಷ ವಯಸ್ಸು. ಆದರೆ ಈಗಲೂ ಸಹ ಕರೀನಾ ಕಪೂರ್ ಗ್ಲಾಮರ್ ಕಡಿಮೆ ಆಗಿಲ್ಲ.

    ಕರೀನಾ ಕಪೂರ್​ಗೆ 44

ಇತ್ತೀಚೆಗೆ ನಡೆದ ಪ್ರತಿಷ್ಠಿತ ಲ್ಯಾಕ್ಮೆ ಫ್ಯಾಷನ್ ವೀಕ್ 2025 ರಲ್ಲಿ ಗ್ಲಾಮರಸ್ ಅವತಾರದಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡರು.

   ಲ್ಯಾಕ್ಮೆ ಫ್ಯಾಷನ್ ವೀಕ್

ಖ್ಯಾತ ವಿನ್ಯಾಸಕ ಮನೀಷ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ಲೆಹಂಗಾ ತೊಟ್ಟು ಲ್ಯಾಕ್ಮೆ ಫ್ಯಾಷನ್ ವೀಕ್ 2025 ನಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡರು.

    ಮನೀಷ್ ಮಲ್ಹೋತ್ರಾ

ಈ ಚಿತ್ರಗಳಲ್ಲಿ ಕರೀನಾ ಕಪೂರ್ ತೊಟ್ಟಿರುವ ಮನೀಷ್ ಮಲ್ಹೋತ್ರಾ ವಿನ್ಯಾಸದ ಉಡುಗೆಯ ಬೆಲೆ ಸುಮಾರು 8 ಲಕ್ಷ ರೂಪಾಯಿಗಳಂತೆ.

  ಉಡುಗೆಯ ಬೆಲೆ ಎಷ್ಟು?

ಕರೀನಾ ಕಪೂರ್ ಕೊರಳಲ್ಲಿ ಧರಿಸಿರುವ ವಜ್ರದ ನೆಕ್​ಲೆಸ್ ಬೆಲೆ ಒಂದು ಕೋಟಿಗೂ ಹೆಚ್ಚು ಎಂದು ಬಾಲಿವುಡ್ ಮ್ಯಾಗಜೀನ್ ವರದಿ ಮಾಡಿದೆ.

    ವಜ್ರದ ನೆಕ್​ಲೆಸ್ ಬೆಲೆ

ಕರೀನಾ ಕಪೂರ್ ಈಗಲೂ ಕೆಲ ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸುತ್ತಲಿದ್ದಾರೆ. ಕೊನೆಯದಾಗಿ ‘ಸಿಂಘಂ ಅಗೇನ್’ನಲ್ಲಿ ನಟಿಸಿದ್ದರು.

    ಈಗಲೂ ಬ್ಯುಸಿ ಇದ್ದಾರೆ

ಇದೀಗ ಒಂದು ಹೊಸ ಮರ್ಡರ್ ಮಿಸ್ಟರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತದೆಯಂತೆ.

ಮರ್ಡರ್ ಮಿಸ್ಟರ್ ಸಿನಿಮಾ