ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ ತಮಿಳಿ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೊಸ ತಮಿಳು ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ.

27 Mar 2024

Author : Manjunatha

ಕಿಯಾರಾ ಅಡ್ವಾಣಿ ಬಾಲಿವುಡ್​ನ ಬೇಡಿಕೆಯ ನಟಿ. ಸಖತ್ ಸೌಂದರ್ಯ ಹೊಂದಿರುವ ಕಿಯಾರಾ ಅಡ್ವಾಣಿ ಅಷ್ಟೆ ಬೇಡಿಕೆಯ ನಟಿ ಸಹ ಹೌದು.

ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿಗೆ ದಕ್ಷಿಣ ಭಾರತ ಚಿತ್ರರಂಗ ಹೊಸದಲ್ಲ. ಆದರೆ ಕಿಯಾರಾ ಈ ವರೆಗೆ ಕೇವಲ ತೆಲುಗಿನ ಒಂದೆರಡು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗ

ಇದೀಗ ಕಿಯಾರಾ ಅಡ್ವಾಣಿಗೆ ಭಾರಿ ದೊಡ್ಡ ತಮಿಳು ಸಿನಿಮಾದ ಆಫರ್ ದೊರಕಿದೆ. ತಮಿಳಿನ ಯುವ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಲಿದ್ದಾರೆ.

ತಮಿಳು ಸಿನಿಮಾ ಆಫರ್

ಕಿಯಾರಾ ಅಡ್ವಾಣಿ ಮಹೇಶ್ ಬಾಬು ಜೊತೆಗೆ ‘ಭರತ್ ಅನೇ ನೇನು’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು.

‘ಭರತ್ ಅನೇ ನೇನು’

‘ಭರತ್ ಅನೆ ನೇನು’ ಸಿನಿಮಾದ ಬಳಿಕ ‘ವಿನಯ ವಿದೇಯ ರಾಮ’ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ನಟಿಸಿದರು. ಆ ಸಿನಿಮಾದಲ್ಲಿ ರಾಮ್ ಚರಣ್ ನಾಯಕರಾಗಿ ನಟಿಸಿದ್ದರು.

‘ವಿನಯ ವಿದೇಯ ರಾಮ’

ಇದೀಗ ಮತ್ತೊಮ್ಮೆ ರಾಮ್ ಚರಣ್ ಜೊತೆಗೆ ‘ಗೇಮ್ ಚೇಂಜರ್’ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ.

‘ಗೇಮ್ ಚೇಂಜರ್’ ಸಿನಿಮಾ

ಕಿಯಾರಾ ಅಡ್ವಾಣಿಗೆ ಇದೀಗ ಹೊಸ ತಮಿಳು ಸಿನಿಮಾ ಆಫರ್ ದೊರೆತಿದ್ದು, ಆ ಸಿನಿಮಾ ಕೇವಲ ತಮಿಳು ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ತಮಿಳು ಸಿನಿಮಾ ಆಫರ್

ಕಿಯಾರಾ ಅಡ್ವಾಣಿ ಕಳೆದ ವರ್ಷ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿವಾಹವಾಗಿದ್ದಾರೆ. ಮದವೆಯಾದ ಬಳಿಕವೂ ಸಹ ಕಿಯಾರಾ ಅಡ್ವಾಣಿಯ ಬೇಡಿಕೆ ಕಡಿಮೆ ಆಗಿಲ್ಲ.

ಸಿದ್ಧಾರ್ಥ್ ಮಲ್ಹೋತ್ರಾ

‘ಗೇಮ್ ಚೇಂಜರ್’ ಸಿನಿಮಾದ ಜೊತೆಗೆ ಹಿಂದಿಯ ‘ವಾರ್ 2’ ಸಿನಿಮಾನಲ್ಲಿ ಕಿಯಾರಾ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಹೃತಿಕ್ ರೋಷನ್ ಎದುರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಹಿಂದಿಯ ‘ವಾರ್ 2’

ಚಿತ್ರರಂಗಕ್ಕೆ ಗುಡ್​ ಬೈ ಹೇಳಿ ರಾಜಕೀಯಕ್ಕೆ ಧುಮುಕಲಿದ್ದಾರೆ ಟಾಲಿವುಡ್ ಬೆಡಗಿ ಅನುಷ್ಕಾ ಶೆಟ್ಟಿ, ಯಾವ ಪಕ್ಷ, ಕ್ಷೇತ್ರ ಯಾವುದು?