ರಕುಲ್ ಪ್ರೀತ್ ಸಿಂಗ್ ಧರಸಿರುವ ಈ ಹೊಳೆಯುವ ಉಡುಪಿನ ಬೆಲೆ ಎಷ್ಟು ಲಕ್ಷ ಅಂದಾಜಿಸಬಲ್ಲಿರೇ?

16 Feb 2024

Author : Manjunatha

ನಟಿ ರಕುಲ್ ಪ್ರೀತ್ ಸಿಂಗ್ ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟವರು. ಆ ನಂತರ ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆದರು.

ಕನ್ನಡದ ‘ಗಿಲ್ಲಿ’ ಸಿನಿಮಾ

ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗಗಳಲ್ಲಿ ಹಲವು ಸ್ಟಾರ್ ನಟರೊಟ್ಟಿಗೆ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳು ಅವರ ಖಾತೆಯಲ್ಲಿವೆ.

ಸ್ಟಾರ್ ನಟರೊಟ್ಟಿಗೆ ನಟನೆ

ಇದೀಗ ನಟಿ ರಕುಲ್ ಪ್ರೀತ್ ಸಿಂಗ್ ಮದುವೆಯಾಗುತ್ತಿದ್ದಾರೆ. ಬಹು ಸಮಯದ ಗೆಳೆಯ, ನಟ, ನಿರ್ಮಾಪಕ ಜಾಕಿ ಭಗ್ನಾನಿಯೊಟ್ಟಿಗೆ ರಕುಲ್ ವಿವಾಹ ನಿಶ್ಚಯವಾಗಿದೆ.

ರಕುಲ್ ವಿವಾಹ ನಿಶ್ಚಯ

ಅಪಾರ ಫ್ಯಾಷನ್ ಸೆನ್ಸ್ ಉಳ್ಳ ರಕುಲ್ ಪ್ರೀತ್ ಸಿಂಗ್ ಇನ್​ಸ್ಟಾಗ್ರಾಂನಲ್ಲಿ ಭಿನ್ನ-ಭಿನ್ನ ಉಡುಗೆ ತೊಟ್ಟ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ರಕುಲ್ ಫ್ಯಾಷನ್ ಸೆನ್ಸ್ 

ಇತ್ತೀಚೆಗೆ ಹಸಿರು ಬಣ್ಣದ ಹೊಳೆಯುವ ಮಾದರಿಯ ಉಡುಗೆ ತೊಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ ರಕುಲ್. ಈ ಉಡುಗೆಯ ಬೆಲೆ ಎಷ್ಟು ಗೊತ್ತೆ?

ಉಡುಗೆಯ ಬೆಲೆ ಎಷ್ಟು?

ಈ ಹೊಳೆವ ಹಸಿರು ಬಣ್ಣದ ಉಡುಗೆಯ ಬೆಲೆ 1.28 ಲಕ್ಷ ರೂಪಾಯಿಗಳು. ಈ ಉಡುಗೆಯ ಹೆಸರು ಗ್ರೀನ್ ಕಲರ್ಡ್​ ಜಾರ್ಜೆಟ್ ಶರಾರಾ ಸೆಟ್.

ಜಾರ್ಜೆಟ್ ಶರಾರಾ ಸೆಟ್

ರಕುಲ್ ಪ್ರೀತ್ ಸಿಂಗ್ ತೊಟ್ಟಿರುವ ಈ ಉಡುಗೆಯನ್ನು ವಿನ್ಯಾಸ ಮಾಡಿರುವುದು  ಬಾಲಿವುಡ್​ನ ಬೇಡಿಕೆಯ ವಸ್ತ್ರ ವಿನ್ಯಾಸಕಿಯರಲ್ಲಿ ಒಬ್ಬರಾದ ಸೀಮಾ ಗುಜ್ರಾಲ್.

ಸೀಮಾ ಗುಜ್ರಾಲ್ ವಿನ್ಯಾಸ

ರಕುಲ್ ತೊಟ್ಟಿರುವ ಜಾರ್ಜೆಟ್ ಶರಾರಾ ಸೆಟ್​ ಬಟ್ಟೆಯ ಮೇಲ್ಭಾಗದಲ್ಲಿ ಕನ್ನಡಿಯ ವರ್ಕ್ ಮಾಡಲಾಗಿದೆ. ಜೊತೆಗೆ ಪುಟ್ಟ ಬ್ಯಾಗು ಸಹ ಅದಕ್ಕೆ ಹೊಂದುವಂತೆಯೇ ಇದೆ.

ಕನ್ನಡಿಯ ವರ್ಕ್ ಇದೆ

ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಬಗ್ನಾನಿ ಗೋವಾದಲ್ಲಿ ವಿವಾಹವಾಗಲಿದ್ದು, ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಸೆಲೆಬ್ರಿಟಿಗಳು ಹಾಜರಾಗಲಿದ್ದಾರೆ.

ಗೋವಾದಲ್ಲಿ ವಿವಾಹ

ಹೊಸ ತಮಿಳು ಸಿನಿಮಾದಲ್ಲಿ ಸ್ಟಾರ್ ನಟಿಯ ಬದಲಿಗೆ ರುಕ್ಮಿಣಿ ವಸಂತ್​ಗೆ ಅವಕಾಶ