Pic credit - Instagram

Author: Rajesh Duggumane

09 July 2025

ದೇಶ ಸುತ್ತುತ್ತಾ ಕೋಶ ಓದುವ ರಂಜನಿ ರಾಘವನ್ 

ರಂಜನಿ ರಾಘವನ್ 

ರಂಜನಿ ರಾಘವನ್ ಅವರು ದೇಶ ಸುತ್ತಾತ್ತಾರೆ. ಸಮಯ ಸಿಕ್ಕಾಗಲೆಲ್ಲ ಅವರು ಆಗಾಗ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಾರೆ. 

ಸ್ಥಳೀಯ ಪ್ರದೇಶ 

ಸ್ಥಳೀಯ ಪ್ರದೇಶಗಳಿಗೆ ಭೇಟಿ ನೀಡೋದು ಎಂದರೆ ರಂಜನಿ ರಾಘವನ್ ಅವರಿಗೆ ಎಲ್ಲಿಲ್ಲದ ಖುಷಿ. ಈ ಕಾರಣಕ್ಕೆ ಅವರು ಸ್ಥಳೀಯ ಪ್ರದೇಶಗಳನ್ನು ಹೆಚ್ಚು ಪ್ರಮೋಟ್ ಮಾಡುತ್ತಾರೆ. 

ಗಗನಚುಕ್ಕಿ 

ಇತ್ತೀಚೆಗೆ ರಂಜನಿ ರಾಘವನ್ ಅವರು ಗಗನಚುಕ್ಕಿ-ಭರಚುಕ್ಕಿ ಜಲಪಾತಕ್ಕೆ  ಭೇಟಿ ನೀಡಿದ್ದರು. ಈ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದರು. 

ಕೋಶವನ್ನೂ ಓದುತ್ತಾರೆ

ರಂಜನಿ ರಾಘವನ್​ಗೆ ಓದು ಎಂದರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗ ಅವರು ಓದುವುದರಲ್ಲಿ ತೊಡಗಿಕೊಳ್ಳುತ್ತಾರೆ. 

ಸಿನಿಮಾ ನಿರ್ದೇಶನ 

ರಂಜನಿ ಅವರು ಸಿನಿಮಾ ನಿರ್ದೇಶನ ಕೂಡ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ‘ಡಿ ಡಿ ಢಿಕ್ಕಿ’ ಎಂಬುದು ಚಿತ್ರದ ಟೈಟಲ್ 

ಬರವಣಿಗೆ 

ರಂಜನಿ ಅವರು ಬರವಣಿಗೆ ಕೃಷಿಯನ್ನು ಮಾಡಿಕೊಂಡು ಬಂದವರು. ಇದರಲ್ಲಿ ಅವರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.  ಕಥೆ ಪುಸ್ತಕಗಳನ್ನು ಅವರು ಬರೆದಿದ್ದಾರೆ. 

ಧಾರಾವಾಹಿ 

ಧಾರಾವಾಹಿಗಳಲ್ಲಿ ನಟಿಸಿ ರಂಜನಿ ಬ್ಯುಸಿ ಇದ್ದರು. ಈಗ ಅವರು ಸಂಪೂರ್ಣವಾಗಿ ಹಿರಿತೆರೆಯಲ್ಲಿ ತೊಡಗಿಕೊಂಡಿದ್ದಾರೆ. 

ಮದುವೆ

ರಂಜನಿ ಅವರು ಹುಡಗನನ್ನು ನೋಡಿಟ್ಟುಕೊಂಡಿದ್ದಾರೆ. ಶೀಘ್ರವೇ ಇವರ ವಿವಾಹ ನೆರವೇರಲಿದೆ.  ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.